ಪುತ್ತೂರು : ಜಾಗದ ವಿಚಾರವಾಗಿ ಅನ್ಯಕೋಮಿನ ಯುವಕರ ತಂಡವೊಂದು ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ಕೆದಿಲದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮಾಜಿ ಯೋಧ ಶಿವರಾಮ್ ಭಟ್ ಎಂಬವರ ಪತ್ನಿ ಹಲ್ಲೆಗೊಳಗಾದ ಮಹಿಳೆ.
ಕೆದಿಲ ಗ್ರಾಮ ಪಂಚಾಯತ್ ಸದಸ್ಯ ಹಬೀಬ್ ಹಾಗೂ ತಂಡ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದು, ಗಾಯಗೊಂಡ ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದ್ದು, ಮಹಿಳೆಗೆ ಹಾಗೂ ಮನೆಯವರಿಗೆ ಧೈರ್ಯ ತುಂಬಿದರು.