ಪುತ್ತೂರು : ಜಾಗದ ವಿಚಾರವಾಗಿ ತಕರಾರು ನಡೆದು ಹಲ್ಲೆ ನಡೆಸಿದ ಬಗ್ಗೆ ಇತ್ತಂಡಗಳು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಕೆದಿಲ ನಿವಾಸಿ ಸವಿತಾ ಭಟ್ ನೀಡಿರುವ ದೂರಿನ ಮೇರೆಗೆ ಹೈದರಾಲಿ, ಹಬೀಬ್ ಮೊಹ್ಸಿನ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳೆಯ ಪತಿಯ ಒಡೆತನದಲ್ಲಿರುವ ಜಮೀನಿನ ಪಕ್ಕದಲ್ಲಿ ಹೈದಾರಾಲಿ ಎಂಬಾತನಿಗೆ ಸೇರಿದ ಜಾಗವಿದ್ದು, ಸದ್ರಿ ಜಮೀನುಗಳ ಗಡಿಗೆ ಸಂಬಂಧಿಸಿದಂತೆ ತಕರಾರು ಇರುವುದಾಗಿದೆ.
ಫೆ.11 ರಂದು ಸಂಜೆ ಸಮಯ, ಸದ್ರಿ ಗಡಿ ತಕರಾರು ಇರುವ ಜಾಗದಲ್ಲಿ ಹೈದರಾಲಿ, ಹಬೀಬ್ ಮೊಹ್ಸಿನ್ ಹಾಗೂ ಇತರ 15 ಜನರು ಬೇಲಿ ಹಾಕಲು ಬಂದಾಗ, ಮಹಿಳೆಯ ಪತಿ ಆಕ್ಷೇಪ ವ್ಯಕ್ತಪಡಿಸಿರುತ್ತಾರೆ. ಆ ವೇಳೆ ಹಬೀಬ್ ಮೊಹ್ಸಿನ್ ಎಂಬವರು ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಕಬ್ಬಿಣದ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದು, ಬಳಿಕ ಹೈದರಾಲಿ ಹಾಗೂ ಇತರರು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ತೆರಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಮಹಿಳೆ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 10/2024ಕಲಂ 324,504,506 R/w 149 ಐಪಿಸಿ ಪ್ರಕರಣ ದಾಖಲಾಗಿರುತ್ತದೆ.
ಇನ್ನೊಂದು ತಂಡ ನೀಡಿದ ದೂರಿನಲ್ಲೇನಿದೆ..!?
ಹೈದರಾಲಿ ರವರ ಪತ್ನಿ ನೀಡಿರುವ ದೂರಿನ ಮೇರೆಗೆ ಸವಿತಾ ಭಟ್ ಹಾಗೂ ಶಿವರಾಮ್ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳೆಯ ಪತಿ ಜಮೀನಿಗೆ ಬೇಲಿ ಹಾಕುತ್ತಿದ್ದಾಗ ಸವಿತಾ ಭಟ್ ಹಾಗೂ ಶಿವರಾಮ್ ಭಟ್ ರವರು ತಕರಾರು ತೆಗೆದು, ಬೇಲಿಯನ್ನು ಕಿತ್ತು ಬಿಸಾಕಿರುತ್ತಾರೆ. ಈ ವೇಳೆ ಬೇಲಿಯ ಕಂಬ ಅಲ್ಲಿ ಕೆಲಸ ಮಾಡುತ್ತಿದ್ದ ಆಲಿ ಎಂಬವರಿಗೆ ತಾಗಿ ಗಾಯವಾಗಿರುತ್ತದೆ.
ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿರುವುದಲ್ಲದೇ, ಅನುಚಿತವಾಗಿ ವರ್ತಿಸಿರುತ್ತಾರೆ. ಬಳಿಕ ಜೀವ ಬೆದರಿಕೆ ಹಾಕಿ ತೆರಳಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಗಾಯಾಳುಗಳು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 11/2024ಕಲಂ 324,354,504 R/w 34 ಐಪಿಸಿ ಪ್ರಕರಣ ದಾಖಲಾಗಿದ್ದು, ಎರಡೂ ಪ್ರಕರಣ ತನಿಖೆ ನಡೆಸಲಾಗುತ್ತಿದೆ.