ಚಾಮರಾಜನಗರ : ಕರಿಮಣಿ ಮಾಲೀಕ ನೀನಲ್ಲ ಎಂದು ಹೆಂಡತಿ ರೀಲ್ಸ್ ಮಾಡಿದ್ದಕ್ಕೆ ಗಂಡ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಕುಮಾರ್ (33) ಮೃತರು.
ಮೃತ ಕುಮಾರ್ ಪಿ.ಜಿ.ಪಾಳ್ಯ ಗ್ರಾಮದ ನಿವಾಸಿ. ಮೃತ ಕುಮಾರ್ ಹೆಂಡತಿ ಸೋದರ ಮಾವ ಮತ್ತವರ ಹೆಂಡತಿ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂದು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಪೋಸ್ಟ್ ಮಾಡಿರೋ ರೀಲ್ಸ್ ತೆಗೆಯುವಂತೆ ಗಂಡ ಮನವಿ ಮಾಡಿಕೊಂಡಿದ್ದಾನೆ.
ಇದೇ ವಿಚಾರಕ್ಕೆ ದಂಪತಿ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಹೀಗಾಗಿ ಪತ್ನಿಯ ವರ್ತನೆಗೆ ಮನನೊಂದು ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಹನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
 
	    	



























