ಪುತ್ತೂರು : ಟಿಪ್ಪರ್ ಲಾರಿ ಹಾಗೂ ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿದ ಹಿನ್ನೆಲೆ ಆಕ್ಟಿವಾ ಸವಾರ ಗಾಯಗೊಂಡ ಘಟನೆ ದರ್ಬೆ ಸಮೀಪದ ಅಶ್ವಿನಿ ಬಾರ್ & ರೆಸ್ಟೋರೆಂಟ್ ಬಳಿ ನಡೆದಿದೆ.
ಗಾಯಗೊಂಡ ಆಕ್ಟಿವಾ ಸವಾರನನ್ನು ದಿವಾಕರ್ ಮಡಿವಾಳ ಎಂದು ಗುರುತಿಸಲಾಗಿದೆ.

ಗಾಯಾಳುವನ್ನು ಅರುಣ್ ಕುಮಾರ್ ಪುತ್ತಿಲ ರವರು ತಮ್ಮ ವಾಹನದಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.