ಮೋದಿ ಮೂರನೇ ಬಾರಿ ಗದ್ದುಗೆ ಹಿಡಿಯಲು ಭರ್ಜರಿ ತಯಾರಿ ಶುರುವಾಗಿದೆ. ಮೋದಿ ಗುಜರಾತ್ನಲ್ಲಿ ಅಭಿವೃದ್ಧಿ ಪರ್ವಕ್ಕೆ ಚಾಲನೆ ನೀಡ್ತಿದ್ರೆ, ಇತ್ತ ಅಮಿತ್ ಶಾ-ನಡ್ಡಾ ಸದ್ದಿಲ್ಲದೇ ಐದು ರಾಜ್ಯಗಳಿಗೆ ಎಲೆಕ್ಷನ್ ಫಾರ್ಮೂಲಾ ರೆಡಿ ಮಾಡಿದ್ದಾರೆ. ಫೆ.29ಕ್ಕೆ ಪಕ್ಷದ ಚುನಾವಣಾ ಸಮಿತಿ ಸಭೆ ಕರೆದಿದ್ದು, ಮೊದಲ ಪಟ್ಟಿ ರಿಲೀಸ್ಗೂ ಸಿದ್ಧತೆ ಮಾಡ್ಕೊಂಡಿದೆ.
ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಇದು ಈ ಬಾರಿ ಬಿಜೆಪಿ ಮೊಳಗಿಸಿದ ಘೋಷಣೆ. ಅತ್ತ ಪ್ರಧಾನಿ ಮೋದಿ, ಅಬ್ ಕಿ ಬಾರ್ ಚಾರ್ ಸೌ ಪಾರ್ ಅಂತ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ. ಈ ಟಾರ್ಗೆಟ್ ರೀಚ್ ಮಾಡಲು ಬಿಜೆಪಿ ಚುನಾವಣಾ ಚಾಣಾಕ್ಯ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ನಡ್ಡಾ ರಣ ತಂತ್ರಗಳನ್ನ ರೂಪಿಸ್ತಿದ್ದಾರೆ. ಅದರ ಭಾಗವೇ ಬಿಜೆಪಿ ಹೆಡ್ಕ್ವಾರ್ಟರ್ಸ್ ಮ್ಯಾರಾಥಾನ್ ಮೀಟಿಂಗ್ಗಳಿಗೆ ಸಾಕ್ಷಿ ಆಗಿದೆ.
ಚುನಾವಣಾ ಘೋಷಣೆಗೂ ಮೊದಲೇ ಬಿಜೆಪಿ ಮೊದಲ ಪಟ್ಟಿ!
ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಾಲೀಮು ಆರಂಭಿಸಿದೆ.. ಮುಂದಿನ ತಿಂಗಳು ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಲಿದೆ.. ಅದಕ್ಕೂ ಮುಂಚೆಯೇ ಬಿಜೆಪಿ ತನ್ನ ತಯಾರಿ ಆರಂಭಿಸಿ ಬಿಟ್ಟಿದೆ.. ನಿನ್ನೆ ಐದು ರಾಜ್ಯಗಳ ಪ್ರಮುಖರ ಜೊತೆ ಸರಣಿ ಸಭೆ ಆಗಿದೆ. ಲೋಕಸಭೆಗೆ ಗರಿಷ್ಠ ಸಂಖ್ಯೆಯ ಸಂಸದರನ್ನು ಕಳುಹಿಸುವ ಉತ್ತರ ಪ್ರದೇಶ ಸೇರಿ ಪಶ್ಚಿಮ ಬಂಗಾಳ, ತೆಲಂಗಾಣ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳ ಚುನಾವಣಾ ಕಾರ್ಯ ತಂತ್ರದ ಸಭೆ ನಡೆದಿದೆ.
ಗುರುವಾರ ಹೈವೋಲ್ಟೇಜ್ ಮೀಟಿಂಗ್
ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ ಎಲೆಕ್ಷನ್ ತಯಾರಿ.
ಒಟ್ಟು 100 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ರಿಲೀಸ್ಗೆ ಬಿಜೆಪಿ ಸಿದ್ಧತೆ.
ಫೆಬ್ರವರಿ 29 ಪಕ್ಷದ ಚುನಾವಣಾ ಸಮಿತಿಯ ಸಭೆ ಕರೆದ ಬಿಜೆಪಿ
ದುರ್ಬಲ ರಾಜ್ಯಗಳು, ದುರ್ಬಲ ಕ್ಷೇತ್ರಗಳಲ್ಲಿ ರಣನೀತಿ ಬಗ್ಗೆ ಚರ್ಚೆ.
ಈ ದುರ್ಬಲ ಕ್ಷೇತ್ರಗಳಲ್ಲೇ ಅಭ್ಯರ್ಥಿಗಳನ್ನ ಘೋಷಿಸುವ ಸಾಧ್ಯತೆ ಪ್ರಚಾರ ತಂತ್ರ ಸುಲಭಗೊಳಿಸಲು ಗುರುವಾರ ತನ್ನ ಮೊದಲ ಪಟ್ಟಿ.
ಹಿಂದಿ ಹಾರ್ಟ್ಲ್ಯಾಂಡ್ನಲ್ಲಿ ಪಕ್ಷದ ಗೆಲುವು ನಿರಾಯಾಸ ಅನ್ನೋದನ್ನ ಬಲ್ಲ ಬಿಜೆಪಿ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಮಲ ಅರಳಿಸಲು ತಂತ್ರ ಹೆಣೆಯುತ್ತಿದೆ. 370 ಸ್ಥಾನಗಳನ್ನ ಗೆಲ್ಲುವ ಪಕ್ಷದ ಗುರಿ ತಲುಪಲು ಮೋದಿ ಕರೆ ನೀಡಿದ್ದಾರೆ. ಮುಂದಿನ 100 ದಿನಗಳು ನಿರ್ಣಾಯಕ ಅಂತ ಕಾರ್ಯಕರ್ತರಿಗೆ ಸಂದೇಶ ನೀಡ್ತಿದ್ದಾರೆ. ಇದೇ ನಿಟ್ಟಿನಲ್ಲಿ ಸದ್ಯ ಬಿಜೆಪಿ ಎಲೆಕ್ಷನ್ ಹೆಡ್ಕ್ವಾರ್ಟರ್ಸ್ನಲ್ಲಿ ಪ್ರತಿ ಕ್ಷೇತ್ರದ ಬಗ್ಗೆ ಚಿಂತನ ಮಂಥನ ಶುರುವಾಗಿದೆ.


























