ಉಪ್ಪಿನಂಗಡಿ : ಕೋಡಿಂಬಾಡಿ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರು ವಿನೂತನ ಪ್ರಯತ್ನ ಒಂದನ್ನು ಮಾಡಿದ್ದು, ಪಂಚಾಯತ್ ವ್ಯಾಪ್ತಿಯ ಮನೆಗಳಿಗೆ ವೈದ್ಯರೊಂದಿಗೆ ತೆರಳಿ ತಪಾಸಣೆ ನಡೆಸಿದರು ಹಾಗೂ ವ್ಯಾಕ್ಸಿನ್ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಂ ಕೆ.ವಿ ಹಾಗೂ ಕೆಪಿಸಿಸಿ ಸದಸ್ಯರಾದ ಡಾ. ರಘು ರವರು ವ್ಯಾಕ್ಸಿನ್ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಡಾ. ರಘು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಂ ಕೆ.ವಿ, ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮುರಳೀಧರ ರೈ, ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಬದಿನಾರು,ಗ್ರಾಮ ಪಂಚಾಯತ್ ಸದಸ್ಯ ರಾದ ಜಗನ್ನಾಥ್ ನಡುಮನೆ,ಗ್ರಾಮ ಪಂಚಾಯತ್ ಸದಸ್ಯ ರಾದ ಪೂರ್ಣಿಮಾ ಯತೀಶ್ ಶೆಟ್ಟಿ,,ಗ್ರಾಮ ಪಂಚಾಯತ್ ಸದಸ್ಯರಾದ ಗೀತಾ ಬಾಬು,ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಲಿಕಾ ಅಶೋಕ್ ಕಾಂತಳಿಕೆ, ಆಶಾ ಕಾರ್ಯಕರ್ತೆಯರಾದ ಪವಿತ್ರಾ ಸುಕೇಶ್ ಶೆಟ್ಟಿ ಬರೆಮೇಲು, ಸುಪ್ರೀತಾ ಅಶೋಕ್ ಬೇರಿಕೆ, ಯುವ ಕಾಂಗ್ರೆಸ್ ತಾಲೂಕು ಕಾರ್ಯದರ್ಶಿ ಸಂತೋಷ್ ಕೃಷ್ಣಗಿರಿ,ಯೋಗೀಶ್ ಸಾಮಾನಿ ಸಂಪಿಗೆದಡಿ, ಮಠಂತಬೆಟ್ಟು, ಯತೀಶ್ ಶೆಟ್ಟಿ, ಬರೆಮೇಲು ಕೋಡಿಂಬಾಡಿ,ಚಂದ್ರ ದರ್ಖಾಸು, ಸುರೇಶ್ ಕೃಷ್ಣಗಿರಿ, ಶಶಿಧರ ಕೃಷ್ಣಗಿರಿ, ರಾಮ ಕೃಷ್ಣಗಿರಿ, ಪ್ರೀತಂ ಕಲ್ಪನೆ, ಪ್ರಮೋದ್ ಸಾಮಾನಿ, ಭವಾನಿ ಸುಂದರ ಕೃಷ್ಣಗಿರಿ, ಯಮುನಾ,ಚೆನ್ನಾ ಕೃಷ್ಣಗಿರಿ,ಲಕ್ಷ್ಮಿ ಕೃಷ್ಣಗಿರಿ, ಮತ್ತಿತರು ಉಪಸ್ಥಿತರಿದ್ದರು.