ಪುತ್ತೂರು; ಪುತ್ತೂರನ್ನು ಕೂಡಾ ಇದೀಗ ಸ್ಮಾರ್ಟ್ ಸಿಟಿ ಅನ್ನಲು ಯಾವುದೇ ತಕಾರಾರುಗಳಿಲ್ಲ. ಈಗಾಗಲೇ ಹತ್ತು ಹಲವು ರೀತಿಗಳಲ್ಲಿ ಸಮಾಜಭಿಮುಕವಾಗಿ ತೆರೆದುಕೊಂಡಿರುವ ಪುತ್ತೂರು ತಾಲುಕಿನ ಹಿರಿಮೆಗೆ ಮತ್ತೊಂದು ಗರಿಯೂ ಸೇರ್ಪಡೆಯಾಗಿದೆ.
ಹೌದು, ಪುತ್ತೂರಿನ ಹೃದಯ ಭಾಗದಲ್ಲಿರುವ ಏಳ್ಮುಡಿಯಲ್ಲಿ ಇದೀಗ ಮತ್ತೊಂದು ವಿನೂತನ ಮಳಿಗೆಯು ತೆರೆದುಕೊಂಡು ತನ್ನ ಕಾರ್ಯವನ್ನು ಪ್ರಸ್ತುತಪಡಿಸಿಕೊಳ್ಳಲು ಅಣಿಯಾಗಿದೆ. ವಾಣಿಜ್ಯ ಸಂಕೀರ್ಣವೊAದು ಲೋಕಾರ್ಪಣೆಗೊಂಡಿದೆ. ಇದುವೇ ಪ್ರಾವಿಡೆನ್ಸ್ ಪ್ಲಾಝಾ ವಾಣಿಜ್ಯ ಸಂಕೀರ್ಣ.
ಸಿವಿಲ್ ಕನ್ಸçಕ್ಷನ್‌ನಲ್ಲಿ ಸುಧೀರ್ಘ 30 ವರ್ಷಗಳ ಅನುಭವವಿರುವ ಜಯಕುಮಾರ್ ನಾಯರ್ ಹಾಗೂವಿವೈನ್ ಕ್ಯಾಸ್ಟಲಿನರವರ ಪಾಲುದಾರಿಕೆಯಲ್ಲಿ, ಈ ಸುಸಜ್ಜಿತ ಸಂಕೀರ್ಣವು ಬಸ್ ನಿಲ್ದಾಣದ ಕೆಲವೇ ದೂರದಲ್ಲಿ ಕಾರ್ಯನಿರ್ವಹಿಸುತ್ತಿದೆ. 4 ಅಂತಸ್ತುಗಳೊಡನೆ 20000 ಚದರ ಅಡಿ ಇರುವ ಸಂಕೀರ್ಣವು ಎಲ್ಲಾ ರೀತಿಯ ಸುವ್ಯವಸ್ಥೆಗಳೊಡನೆ ನೂತನವಾಗಿ ನಿರ್ಮಾಣಗೊಂಡಿದ್ದು ಇದರ ಶುಭಾರಂಭ ಕಾರ್ಯಕ್ರಮವು ನಡೆಯಿತು.
ಶಾಸಕ ಸಂಜೀವ ಮಠಂದೂರು ಈ ನೂತನ ಮಳಿಗೆಗೆ ರಿಬ್ಬನ್ ಕತ್ತರಿಸಿ ಚಾಲನೆಯನ್ನೀಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕ್ಲಡ್ಕ ಪ್ರಭಕರ್ ಭಟ್ ದೀಪ ಬೆಳಗಿಸಿದರು. ಈ ವೇಳೆ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಿದ್ದು, ಈ ವೇಳೆ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿ, ನಗರಸಭಾ ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಪ್ರೇಮ್ ಕುಮಾರ್, ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅದ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಬುಡಿಯಾರ್ ರಾಧಾಕೃಷ್ಣ ರೈ ವiತ್ತಿತರರು ಉಪಸ್ಥಿತರಿದ್ದರು.
ಆಕರ್ಷಣಿಯ ಸುಸಜ್ಜಿತ ಮಾದರಿ: ನೂತನ ವಾಣಿಜ್ಯ ಸಂಕೀರ್ಣವು ನೆಲಮಹಡಿ ಹಾಗೂ ಮಳಿಗೆ ಮುಂಭಾಗ ಸೇರಿದಂತೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಮಾಲ್‌ಗಳು, ಎಲೆಕ್ಟಾçನಿಕ್ಸö್ಮ ಜವುಳಿ, ಗೃಹೋಪಯೋಗಿ ಇನ್ನಿತರ ಬೃಹತ್ ಮಳಿಗೆಗಳನ್ನು ತೆರೆಯಲು ಅನುಕೂಲಕರವಾಗುವಂತೆ ಸುಸಜ್ಜಿತ ವ್ಯವಸ್ಥೆಗಳೊಡನೆ ನಿಮಾಣಗೊಂಡಿದೆ.
ಈ ಸಂದರ್ಭಲ್ಲಿ ನಗರಸಭಾ ಅಧ್ಯಕ್ಷರಾಗಿ ಆಯ್ಕೆಯಾದ ಜೀವಂಧರ್ ಜೈನ್ ಹಾಗೂ ಉಪಾದ್ಯಕ್ಷರಾಗಿ ಆಯ್ಕಯಾದ ವಿದ್ಯಾ ಆರ್ ಗೌರಿ ಅವರನ್ನು ಗೌರವಿಸಿ ಅಭಿನಂದನೆ ಸಲ್ಲಿಸಲಾಯತು..