ಪುತ್ತೂರು: ಕೊಂಬೆಟ್ಟು ದಿ.ಫಿಲೋಮಿನಾ ಲೋಬೋರವರ ಪತಿ ವಲೇರಿಯನ್ ಸಿಕ್ವೇರಾ(78ವ.) ರವರು ಅನಾರೋಗ್ಯದಿಂದ ಮೇ 27 ರಂದು ಮಹಾವೀರ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಮೃತ ವಲೇರಿಯನ್ ಸಿಕ್ವೇರಾರವರು ಹಿಂದೆ ಜವುಳಿ ಮಳಿಗೆ ವೈ ನಾಗಪ್ಪ &ಸನ್ಸ್ ನಲ್ಲಿ ಸೇಲ್ಸ್ ಮ್ಯಾನ್ ಆಗಿ ವೃತ್ತಿ ನಿರ್ವಹಿಸಿದ್ದರು. ಅಲ್ಲದೆ ಮಾಯಿದೆ ದೇ ದೇವುಸ್ ಚರ್ಚ್ ವ್ಯಾಪ್ತಿಯಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(clc) ಸಂಸ್ಥೆಯ ಸ್ಥಾಪಕ ಸದಸ್ಯರೂ ಹೌದು. ಮೃತ ವಲೇರಿಯನ್ ಸಿಕ್ವೇರಾರವರು ಪುತ್ರಿಯರಾದ ಡೀನಾ, ಡೈನಾರವರನ್ನು ಅಗಲಿದ್ದಾರೆ.