ಕಡಬ: ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ನಿಯಮ ಮುಂದುವರೆಸಿದ್ದು ಎಲ್ಲಾ ಅಂಗಡಿಗಳು ಬಾಗಿಲು ಮುಚ್ಚಿವೆ. ಆದರೆ ಕಡಬದಲ್ಲಿ ತಹಶೀಲ್ದಾರ್ ಕಚೇರಿ ಬಳಿ ಇರುವ ದ್ವಿಚಕ್ರ ವಾಹನ ಶೋರೂಂ ಮಾತ್ರ ಮತ್ತೆ ತನ್ನ ಪ್ರಭಾವ ಬಳಸಿ ಶೋ ರೂಂ ಓಪನ್ ಮಾಡಿದ್ದು ಗ್ರಾಹಕರ ವಾಹನ ಸರ್ವಿಸ್ ಗೆ ಮುಂದಾಗಿದೆ.
ಶೋ ರೂಂ ಮುಚ್ಚಿಸಲು ಸ್ಥಳಕ್ಕೆ ಆಗಮಿಸಿದ ಕೋವಿಡ್ ನೋಡಲ್ ಅಧಿಕಾರಿ ಹರೀಶ್ ಬೆದ್ರಾಜೆ ಅವರು ಬೀಗ ಹಾಕುವಂತೆ ಸೂಚಿಸಿದಾಗ ಸ್ಥಳದಲ್ಲಿದ್ದ ಕಚೇರಿ ಸಿಬ್ಬಂದಿಗಳು ಬೀಗ ಹಾಕಿದರು. ಬಳಿಕ ಶೋ ರೂಂ ಮಾಲಕ ಪೋನ್ ನಲ್ಲಿ ಸಿಬ್ಬಂದಿಯಲ್ಲಿ ಶೋ ರೂಂ ಬಂದ್ ಮಾಡಲು ಬಂದ ಅಧಿಕಾರಿಯ ಕೈಯಲ್ಲಿ ಪೋನ್ ನೀಡಲು ಹೇಳಿದ್ರು. ಅಧಿಕಾರಿಯ ಜೊತೆ ಪೋನ್ ನಲ್ಲಿ ದಬಾಯಿಸಿದ ಮಾಲಕ ಶೋ ರೂಂ ಮುಚ್ಚಿಸಲು ಯಾರು ಎಂದು ಅಧಿಕಾರಿಯನ್ನೇ ಪ್ರಶ್ನಿಸಿ ಕರೆ ಕಡಿತಗೊಳಿಸಿದ್ದ.
ಇದರಿಂದ ಕೋಪಗೊಂಡ ಅಧಿಕಾರಿ ಮೇಲಾಧಿಕಾರಿಗಳ ಸೂಚನೆಯಂತೆ ಅಂಗಡಿ ಮುಚ್ಚಿಸಲು ಬಂದಿದ್ದೇನೆ.ನಮ್ಮನ್ನೇ ಪ್ರಶ್ನಿಸಿದರೆ ಹೇಗೆ ಎಂದಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಬ್ಬಂದಿಗಳನ್ನು ವಿಚಾರಿಸಿ ವಾಗ್ವಾದ ನಡೆಸಿದಲ್ಲಿ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಬಗ್ಗೆ ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಅವರು ಪ್ರತಿಕ್ರಿಯೆ ನೀಡಿ, ಈಗಾಗಲೇ ಕಡಬದಲ್ಲಿರುವ ಶೋ ರೂಮ್ ಮಾಲಕರಿಗೆ ಪುತ್ತೂರಿನಲ್ಲಿಯೂ ಶೋ ರೂಮ್ ಇದ್ದು ಅವರು ಅಗತ್ಯ ಸೇವೆಯಲ್ಲಿ ರುವವರ ದ್ವಿಚಕ್ರ ವಾಹನವನ್ನು ದುರಸ್ತಿ ಮಾಡಲು ಸರ್ವೀಸ್ ವಿಭಾಗಕ್ಕೆ ಅನುಮತಿ ಕೇಳಿದ್ದರು.ಈ ಹಿನ್ನೆಲೆಯಲ್ಲಿ ಕೊಟ್ಟಿದ್ದೆ ಎಂದು ಹೇಳಿದ್ದಾರೆ.