ಮಂಗಳೂರು : ಸಾರ್ವಜನಿಕ ರಸ್ತೆಯಲ್ಲಿ ಇಫ್ತಾರ್ ಆಯೋಜನೆ ಮಾಡಿದ್ದ ಆಯೋಜಕರಿಗೆ ಚುನಾವಣಾ ಆಯೋಗ ನೋಟೀಸ್ ಜಾರಿ ಮಾಡಿದೆ.
ಮಂಗಳೂರು ಹೊರ ವಲಯ ಮುಡಿಪುವಿನಲ್ಲಿ ರಸ್ತೆಯಲ್ಲಿ ಇಫ್ತಾರ್ ಕೂಟ ನಡೆದಿತ್ತು.
ಆಟೋ ಚಾಲಕರು ಸೇರಿ ಆಯೋಜಿಸಿದ ಇಫ್ತಾರ್ ಕೂಟ ಇದಾಗಿತ್ತು. ಇಫ್ತಾರ್ ಕೂಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವೀಡಿಯೋ ಕುರಿತು ಪರ-ವಿರೋಧ ಚರ್ಚೆಗಳು ನಡೆದಿದ್ದವು.
ಸದ್ಯ ಚುನಾವಣಾ ಆಯೋಗದಿಂದ ಆಯೋಜಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಇಫ್ತಾರ್ ಕೂಟದ ಹೆಸರಿನಲ್ಲಿ ಸಾರ್ವಜನಿಕರಿಗೆ ಸಹ ಭೋಜನ ವ್ಯವಸ್ಥೆ ಮಾಡಿದ್ದು, ಈ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ ಅಂತ ನೋಟೀಸ್ ಜಾರಿ ಮಾಡಲಾಗಿದೆ.