ಬಂಟ್ವಾಳ : ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಟ ಎಂದು ತುಮಕೂರು ಪಾವಗಡದ ಘಟನೆಯ ವೀಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ದುರುದ್ದೇಶದೊಂದಿಗೆ ಪ್ರಸಾರ ಮಾಡಿದ ಬಗ್ಗೆ ಬಂಟ್ವಾಳ ಬಿಜೆಪಿಯ ನಿಯೋಗ ಉಪ ಚುನಾವಣಾಧಿಕಾರಿ ಹಾಗೂ ಬಂಟ್ವಾಳ ನಗರ ಠಾಣಾಧಿಕಾರಿಗಳಿಗೆ ನೀತಿಸಂಹಿತೆಯ ಉಲ್ಲಂಘನೆಯ ಬಗ್ಗೆ ದೂರು ನೀಡಿದೆ.
ಬಿಜೆಪಿ ನಿಯೋಗದಲ್ಲಿ ಬಂಟ್ವಾಳ ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್,ಪ್ರಮುಖರಾದ ಗೋವಿಂದ ಪ್ರಭು,ದೇವಪ್ಪ ಪೂಜಾರಿ,ರಾಮದಾಸ ಬಂಟ್ವಾಳ್,ರವೀಶ್ ಶೆಟ್ಟಿ , ಡೊಂಬಯ ಅರಳ,ಮೋನಪ್ಪ ದೇವಸ್ಯ,ದಿನೇಶ್ ಶೆಟ್ಟಿ ದಂಬೆದಾರ್ ಉಪಸ್ಥಿತರಿದ್ದರು.