ಪುತ್ತೂರು : ನಿಷೇದಿತ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪಡ್ನೂರು ನಿವಾಸಿ ಲಕ್ಷ್ಮಣ ಬಂಧಿತ ವ್ಯಕ್ತಿ.
ಏ.1 ರಂದು ಮಧ್ಯಾಹ್ನ ವೇಳೆ ಪುತ್ತೂರು ತಾಲೂಕು ಲಿನೆಟ್ ಜಂಕ್ಷನ್‌ನ ಬಾರ್ & ರೆಸ್ಟೋರೆಂಟ್‌ನ ಬಳಿ ಪಾನ್‌ಬೀಡ ಅಂಗಡಿಯಲ್ಲಿ ನಿಷೇದಿತ ಕೇರಳದ ಲಾಟರಿ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ, ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ನಂದಕುಮಾರ್ ಎಂ.ಎಂ ರವರು ಹಾಗೂ ಸಿಬ್ಬಂದಿಗಳು, ಲಕ್ಷ್ಮಣ್ ಎಂಬವರನ್ನು ವಿಚಾರಿಸಿದಾಗ ಆತನು ನಿಷೇಧಿತ ಕೇರಳ ರಾಜ್ಯದ ಲಾಟರಿ ಟಿಕೆಟ್ ಅನ್ನು ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದು, ಈ ಬಗ್ಗೆ ತಪಾಸಣೆ ನಡೆಸಿದಾಗ ಒಟ್ಟು ರೂ 1,550/- ಮೌಲ್ಯದ 31 ಲಾಟರಿ ಟಿಕೆಟ್ ಗಳು ಹಾಗೂ ಲಾಟರಿ ಮಾರಾಟ ಮಾಡಿ ಬಂದ ರೂ 1,100/- ನಗದು ವಶಪಡಿಸಿಕೊಳ್ಳಲಾಗಿದೆ.
ಸದ್ರಿ ಸೊತ್ತುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಸ್ವಾಧೀನಪಡಿಸಿ, ಆರೋಪಿ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 33/2024 ಕಲಂ;- 5,7(3) The lotteries (Regulation) ಆಕ್ಟ್ 1998 ಕಾಯ್ದೆಯಡಿ ಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.