ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಮೋ ರೋಡ್ ಶೋ ನೋಡಲು ಬಿಜೆಪಿ ಕಾರ್ಯಕರ್ತರು ಆಗಮಿಸುತ್ತಿದ್ದಾರೆ.
![](https://zoomintv.online/wp-content/uploads/2024/04/IMG-20240414-WA0031-1024x682.jpg)
ನಾರಾಯಣ ಗುರು ಸರ್ಕಲ್ ಬಳಿ ಮೋದಿ ಅಭಿಮಾನಿಗಳು ಜಮಾವಣೆಯಾಗುತ್ತಿದ್ದು, ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದಾರೆ.
ನರೇಂದ್ರ ಮೋದಿ ರೋಡ್ ಶೋ ದಲ್ಲಿ ಭಾಗವಹಿಸುವ ವಾಹನವೂ ಆಗಮಿಸಿದ್ದು, ಎಸ್.ಪಿ.ಜಿ ಅಧಿಕಾರಿಗಳು ಅಂತಿಮ ಹಂತದ ಭದ್ರತೆ ಪರಿಶೀಲನೆ ನಡೆಸುತ್ತಿದ್ದಾರೆ.
ರೋಡ್ ಶೋ ಆರಂಭದ ಸ್ಥಳಕ್ಕೆ ಆರ್. ಎಸ್. ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸಹಿತ ಹಲವು ಗಣ್ಯರು ಆಗಮಿಸುತ್ತಿದ್ದಾರೆ.
ರೋಡ್ ಶೋ ದಾರಿಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.