ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಷ್ ಪ್ರಭು ಇವರಿಗೆ ಬೆಂಗಳೂರಿನ ಪ್ರತಿಷ್ಠಿತ ಅಲಯನ್ಸ್ ವಿಶ್ವವಿದ್ಯಾನಿಲಯ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಪಿ ಹೆಚ್ ಡಿ ಪದವಿಯನ್ನು ಪ್ರಧಾನ ಮಾಡಿದೆ.
ಅಲಯನ್ಸ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಡಾ|ಮುಕುಲ್ ಸಕ್ಸೇನಾ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ರೋಲ್ ಆಫ್ ಪೇಟೆಂಟ್ ಲಾ ಇನ್ ಪ್ರಮೋಟಿಂಗ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಇನ್ ಇನ್ಸ್ಟಿಟ್ಯೂಷನ್ಸ್ ಆಫ್ ಹೈಯರ್ ಲರ್ನಿಂಗ್ ಎ ಕ್ರಿಟಿಕಲ್ ಸ್ಟಡಿ” ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಇವರು ಪುಣಚ ಗ್ರಾಮದ ಶ್ರೀಮತಿ ರತ್ನಾವತಿ ಮತ್ತು ಮುಕುಂದ ಪ್ರಭು ಇವರ ಪುತ್ರ. ಇವರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿರುತ್ತಾರೆ.