ಪುತ್ತೂರು : ಕೋವಿಡ್ -19 ಸಾಂಕ್ರಾಮಿಕ ಖಾಯಿಲೆಯು ಹರಡುತ್ತಿರುವ ಹಿನ್ನೆಯಲ್ಲಿ ಇದನ್ನು ನಿಯಂತ್ರಣ ಮಾಡಲು ಸರಕಾರ ಲಾಕ್ ಡೌನ್ ಘೋಷಿಸಿರುವ ಕಾರಣ ದಿಂದ ಅಟೋ ಚಾಲಕರಿಗೆ ಬಾಡಿಗೆ ಮಾಡಲು ಅಸಾಧ್ಯವಾಗಿರುವ ಕಾರಣ , ಆಟೋದಲ್ಲಿ ಬಾಡಿಗೆ ಮಾಡಿ ದಿನ ನಿತ್ಯ ಮನೆಗೆ ಬೇಕಾದ ಆಹಾರ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಲು ಸಂಕಷ್ಟ ಪಡುತ್ತಿರುವ ಸಂದರ್ಭದಲ್ಲಿ ವಿಟ್ಲ ಪೇಟೆಯ ಆಟೋ ಚಾಲಕರಿಗೆ ಮತ್ತು ಹಲವು ಬಡ ಕುಟುಂಬಗಳಿಗೆ ಉದ್ಯಮಿ , ರೈ ಎಸ್ಟೇಟ್ ಮಾಲಕರು ಹಾಗೂ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಅಕ್ಕಿ , ತರಕಾರಿ, ದಿನಸಿಯ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ವಿತರಿಸಿದರು.
ಅಲ್ಲದೆ ಕೊರೊನಾದ ಬಗ್ಗೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆಯೂ ಜನರಿಗೆ ತಿಳಿಸಿದರು.