ಪುತ್ತೂರು: ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ನೂತನ ಕಟ್ಟಡ ವನ್ನು ನಿರ್ಮಿಸುವ ಬಗ್ಗೆ ಶಿಕ್ಷಣ ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದು ತಕ್ಷಣ ಅನುದಾನ ಬಿಡುಗಡೆ ಮಾಡುವ ಬಗ್ಗೆ ಶಾಸಕರಾದ ಸಂಜೀವ ಮಠಂದೂರುರವರು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರನ್ನು ಭೇಟಿಯಾಗಿ ವಿನಂತಿಸಿದರು.
ತಕ್ಷಣ ಸ್ಪಂದಿಸಿದ ಸಚಿವರು ಅನುದಾನ ಲಭ್ಯತೆಯಾನುಸಾರ ಪುತ್ತೂರಿಗೆ ಪ್ರಥಮ ಪ್ರಾಶಸ್ತ್ಯ ನೀಡುವಂತೆ ವಿಶೇಷ ಕರ್ತವ್ಯಧಿಕಾರಿ ಫಣೀಂದ್ರ ಕುಮಾರ್ ರವರಿಗೆ ಸೂಚಿಸಿದರು.