ಪುತ್ತೂರು : ಬೊಳುವಾರಿನ ಹೋಟೆಲ್ ಹರಿಪ್ರಸಾದ್ ಬಳಿ ಇದ್ದ ಬೃಹತ್ ಗಾತ್ರದ ಮಾವಿನ ಮರವೊಂದು ಧರೆಗುರುಳಿದ ಘಟನೆ ಇಂದು ಸಂಜೆ ನಡೆದಿದೆ.

ಘಟನೆಯಿಂದಾಗಿ ಆಪೆ ರಿಕ್ಷಾ ಸಹಿತ ಹಲವು ವಾಹನಗಳಿಗೆ ಹಾನಿಯಾಗಿದೆ.

ಮಾವಿನ ಮರ ಬಿದ್ದ ನಂತರ ಸಾರ್ವಜನಿಕರೆಲ್ಲರು ಅದರಲ್ಲಿದ್ದ ಮಾವಿನಕಾಯಿಗಳನ್ನು ತೆಗೆದುಕೊಂಡು ಹೋಗುತ್ತಿದ್ದು, ಹಲವಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದಾರೆ.



























