ಕಡಬ : ಸಾಲ ಮರುಪಾವತಿ ಮಾಡಲಾಗದೆ ಜೀವನದಲ್ಲಿ ಜಿಗುಪ್ಸೆಹೊಂದಿ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬದಲ್ಲಿ ನಡೆದಿದೆ.
ಕಡಬ ಬೆಳಂದೂರಿನ ಪಟ್ಟೆ ಮನೆ ನಿವಾಸಿ ರಾಜೇಶ್ ಕುಮಾರ್ (37) ಮೃತರು.
ಪ್ಲಂಬಿಂಗ್ ಕೆಲಸ ಮಾಡಿಕೊಂಡಿದ್ದ ರಾಜೇಶ್ ಮನೆಯಲ್ಲಿ ಒಬ್ಬರೇ ವಾಸವಿದ್ದರು. ರಾಜೇಶ್ ಮನೆಯ ಕೊಟ್ಟಿಗೆಯ ಅಡ್ಡಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ನಿನ್ನೆಯಷ್ಟೇ ರಾಜೇಶ್ ಕುದ್ಮಾರಿನಲ್ಲಿರುವ ಸಹೋದರಿಯ ಮನೆಗೆ ತೆರಳಿದ್ದು, ಸಂಜೆ ವೇಳೆಗೆ ಮನೆಗೆ ವಾಪಾಸ್ಸಾಗಿದ್ದರು. ಇಂದು ಬೆಳಿಗ್ಗೆ ಚಿಕ್ಕಪ್ಪನ ಮಗ ರಾಜೇಶ್ ಗೆ ಕರೆ ಮಾಡಿದ್ದು, ರಾಜೇಶ್ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಉಸಿರಾಟದ ತೊಂದರೆ ಹೊಂದಿರುವ ರಾಜೇಶ್ ಮೋಟಾರು ಸೈಕಲ್ ಗೆ ಮಾಡಿದ ಸಾಲವನ್ನು ಮರುಪಾವತಿ ಮಾಡಲಾಗದೇ ಜೀವನದಲ್ಲಿ ಜಿಗುಪ್ಪೆಹೊಂದಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























