ಪುತ್ತೂರು : ನಗರದ ಮರೀಲು ಕಾಡು ಮನೆಯಲ್ಲಿ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ.28 ರಂದು ಬೆಳಕಿಗೆ ಬಂದಿದೆ.
ಆಟೋ ರಿಕ್ಷಾ ಚಾಲಕ, ಮೂಲತಃ ಜಾಲ್ಸೂರಿನ ಕುಕ್ಕಂದೂರಿನ ಮನೋಜ್ ಅವರ ಪತ್ನಿ ಸಂಧ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
20 ವರ್ಷಗಳಿಂದ ಪುತ್ತೂರಿನ ಮರೀಲ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೇ.27ರಂದು ರಾತ್ರಿ ರಿಕ್ಷಾದಲ್ಲಿ ಬಾಡಿಗೆಗೆ ತೆರಳಿದ್ದ ಮನೋಜ್ ಮೇ.28 ರಂದು ಬೆಳಗ್ಗೆ ಮನೆಗೆ ಬಂದಾಗ ಪತ್ನಿ ಮನೆಯ ಹಾಲ್ನ ಕಿಟಕಿಗೆ ನೇಣುಬಿಗಿದುಕೊಂಡು ಅಸ್ವಸ್ಥ ಸ್ಥಿತಿಯಲ್ಲಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅದಾಗಲೇ ಸಂಧ್ಯಾ ಮೃತಪಟ್ಟಿದ್ದರು.
ಮೃತರು ಪತಿ ಮನೋಜ್, ಪುತ್ರನನ್ನು ಅಗಲಿದ್ದಾರೆ.
























