Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬೆಂಕಿಗಾಹುತಿ; 37 ಪ್ರಯಾಣಿಕರು ಪಾರು..!

    ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬೆಂಕಿಗಾಹುತಿ; 37 ಪ್ರಯಾಣಿಕರು ಪಾರು..!

    ಪುತ್ತೂರು : ಮೃತಪಟ್ಟ ವಿದ್ಯಾರ್ಥಿ ಶ್ರಮಿಕ್ ರೈ: ಅಂತಿಮ ದರ್ಶನ ಪಡೆದ ಶಾಸಕ ಅಶೋಕ್ ರೈ..!

    ಪುತ್ತೂರು : ಮೃತಪಟ್ಟ ವಿದ್ಯಾರ್ಥಿ ಶ್ರಮಿಕ್ ರೈ: ಅಂತಿಮ ದರ್ಶನ ಪಡೆದ ಶಾಸಕ ಅಶೋಕ್ ರೈ..!

    ಪುತ್ತೂರು: ವಿದ್ಯಾರ್ಥಿ ಮೃತ್ಯು ..!!

    ಪುತ್ತೂರು: ವಿದ್ಯಾರ್ಥಿ ಮೃತ್ಯು ..!!

    ಪುತ್ತೂರು : ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ: ಮೂವರ ವಿರುದ್ಧ ಪ್ರಕರಣ..!

    ಪುತ್ತೂರು : ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ: ಮೂವರ ವಿರುದ್ಧ ಪ್ರಕರಣ..!

    ಪಾಣಾಜೆ: ಕೆರೆಯಲ್ಲಿ ವ್ಯಕ್ತಿಯ ಶವ ಪತ್ತೆ..!!

    ಪಾಣಾಜೆ: ಕೆರೆಯಲ್ಲಿ ವ್ಯಕ್ತಿಯ ಶವ ಪತ್ತೆ..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು :ಪೊಲೀಸರ ಮೇಲೆ ಹಲ್ಲೆ- ಇಬ್ಬರು ಆಸ್ಪತ್ರೆಗೆ ದಾಖಲು..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕರಾವಳಿ

ಝೀರೋದಿಂದ 256 ಬೆಡ್ ನ ಮಕ್ಕಳ ಆಸ್ಪತ್ರೆ ಕಟ್ಟಿದ ಡಾ.ಸರ್ಜಿ : ಕಡಿಮೆ ವೆಚ್ಚದ ವೈದ್ಯಕೀಯ ಚಿಕಿತ್ಸೆ ಜೊತೆ 160 ಮಕ್ಕಳ ದತ್ತು : ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಕಿರು ಪರಿಚಯ..

May 29, 2024
in ಕರಾವಳಿ, ರಾಜಕೀಯ, ರಾಜ್ಯ
0
ಝೀರೋದಿಂದ 256 ಬೆಡ್ ನ ಮಕ್ಕಳ ಆಸ್ಪತ್ರೆ ಕಟ್ಟಿದ ಡಾ.ಸರ್ಜಿ : ಕಡಿಮೆ ವೆಚ್ಚದ ವೈದ್ಯಕೀಯ ಚಿಕಿತ್ಸೆ ಜೊತೆ 160 ಮಕ್ಕಳ ದತ್ತು : ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಕಿರು ಪರಿಚಯ..
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ಡಾ.ಧನಂಜಯ ಸರ್ಜಿ ಸಣ್ಣ ಪ್ರಾಯದಲ್ಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಣ ಪಡೆದು ಬೆಳೆದು ಬಂದವರು.

Advertisement
Advertisement
Advertisement

ಕಾಲೇಜು ದಿನಗಳಲ್ಲಿ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದ ಸರ್ಜಿಯವರು ಇಂದು ಖ್ಯಾತ ಮಕ್ಕಳ ತಜ್ಞ.

ಅವರ ಜೀವನ ಸಾಧನೆ ಅಪಾರವಾದದ್ದು. ಕಡಿಮೆ ವೆಚ್ಚದ ವೈದ್ಯಕೀಯ ಸೇವೆ ಜೊತೆ ಸಮಾಜಮುಖಿ ಕಾರ್ಯ ವಿವರಣೆ ಇಲ್ಲಿದೆ.

Advertisement

ಉತ್ಕೃಷ್ಟ ಗುಣಮಟ್ಟದ ಸೇವೆ, ಕೈಗೆಟುಕುವ ದರದಲ್ಲಿ ರೋಗಿಗಳಿಗೆ ಒಂದೇ ಸೂರಿನಡಿ ಸರ್ವ ರೀತಿಯ ಆರೋಗ್ಯ ಸೇವೆ ನೀಡುವ ಮೂಲಕ ಮಲೆನಾಡಿನ ಮನೆಮಾತಾಗಿದೆ.

Advertisement

ಖಾಸಗಿ ಆಸ್ಪತ್ರೆ ಗಳೆಂದರೆ ಬಿಲ್ ನೋಡುತ್ತಲೇ ರೋಗಿಯ ಎದೆ ಝಲ್ ಎನ್ನುತ್ತದೆ. ಆದರೆ, ಇದಕ್ಕೆ ತದ್ವಿರುದ್ಧ ಸರ್ಜಿ ಆಸ್ಪತ್ರೆ. 2014ರಲ್ಲಿ ಝೀರೋ ಬೆಡ್ ನಿಂದ ಆರಂಭಗೊಂಡ ಆಸ್ಪತ್ರೆ ಇಂದು 256 ಬೆಡ್ ಗೆ ತಲುಪಿದ್ದು ಪ್ರಸ್ತುತ ಆರೋಗ್ಯ ಕ್ಷೇತ್ರದ ‘ಹೀರೋ’ ಆಗಿ ಬೆಳೆದದ್ದು ಅಚ್ಚರಿಯ ಸಂಗತಿ.

ಸರಳ, ಸಜ್ಜನ, ಹಮ್ಮು ಬಿಮ್ಮು ಇಲ್ಲದ ಸಹೃದಯಿ ವ್ಯಕ್ತಿತ್ವದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರೂ ಆದ ಡಾ.ಧನಂಜಯ ಸರ್ಜಿ ಅವರು ಮೂಲತಃ ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಗೊತ್ತೇನಹಳ್ಳಿ ಗ್ರಾಮದವರು. ಸರ್ಜಿ ರುದ್ರಪ್ಪ, ತಾಯಿ ರೇಣುಕಾ ಅವರ ಪುತ್ರ. ಇವರ ಎಲ್ಲ ಸಾಧನೆಯ ಹಿಂದೆ ಪತ್ನಿ, ಆಸ್ಪತ್ರೆಯ ನಿರ್ದೇಶಕರೂ ಆದ ನಮಿತಾ ಸರ್ಜಿ ಅವರ ಶ್ರಮವೂ ಇದೆ.

ದಾವಣಗೆರೆಯ ಜೆಜೆಎಂ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಅತ್ಯುತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಿದವರು ಡಾ.ಧನಂಜಯ ಸರ್ಜಿ. ಶಿಕ್ಷಣದ ಹಂತದಲ್ಲೇ ಜಿಲ್ಲೆಯ ಆರೋಗ್ಯ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕನಸು ಕಂಡವರು. ಆ ಕನಸು ಈಗ ಸಾಕಾರಗೊಂಡಿದೆ. 2007ರ ಮಾರ್ಚ್ 18ರಂದು ಶಿವಮೊಗ್ಗದಲ್ಲಿ ‘ಸರ್ಜಿ ಚೈಲ್ಡ್ ಕೇರ್ ಸೆಂಟರ್’ ಮೂಲಕ ಸೇವೆ ಆರಂಭಗೊಂಡಿತು. ನಂತರ ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳಲ್ಲಿ ತಿಂಗಳ ಸಂಬಳಕ್ಕೆ ಕೆಲಸ ಮಾಡಿದರು. 2014ರಂದು ಜೀರೊ ಹಾಸಿಗೆಯಿಂದ ಶುಭಾರಂಗೊಂಡ ಆಸ್ಪತ್ರೆ ಕೇವಲ 9 ವರ್ಷದಲ್ಲಿ 256 ಬೆಡ್ ವರೆಗೆ ತಲುಪಿದೆ.

ಜಿಲ್ಲಾಡಳಿತದಿಂದ ಪ್ರಶಂಸಾ ಪತ್ರ

ಎರಡು ವರ್ಷಗಳ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಕ್ಕಳ ಐಸಿಯು ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭ ನವಜಾತ 13 ಮಕ್ಕಳನ್ನೂ ಸರ್ಜಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಸರ್ಜಿ ಆಸ್ಪತ್ರೆಯಲ್ಲಿ ಈ ಶಿಶುಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಕಾಪಾಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರಶಂಸಾ ಪತ್ರ ನೀಡುವ ಮೂಲಕ ಸೇವೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿತ್ತು.

ಇಂದು ಒಂದೇ ಸೂರಿನಡಿ ಎಲ್ಲಾ ರೀತಿಯ ಚಿಕಿತ್ಸಾ ಸೌಲಭ್ಯ, ಕೈಗೆಟುಕುವ ದರ. ಉತ್ಕೃಷ್ಟ ಹಾಗೂ ನಗುಮೊಗದ ವಿಶ್ವಾಸಾರ್ಹ ಸೇವೆಯೇ ಕಾರಣ. ಈಗ ಅವರ ಸೇವೆಗೆ ರಾಜ್ಯದ ಧಾರವಾಡ, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ಶಿರಸಿ, ಚಿಕ್ಕಮಗಳೂರು, ಹಾಸನ, ಅರಸೀಕರ ಹಾಗೂ ತುಮಕೂರು, ಬೆಂಗಳೂರು ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆ ಪಡೆಯಲು ನಿತ್ಯವೂ ನೂರಾರು ರೋಗಿಗಳು ಬರುತ್ತಿದ್ದಾರೆ. ಒಟ್ಟು 75 ಐಸಿಯು ಬೆಡ್ ಗಳು ಆಪರೇಷನ್ ಥಿಯೇಟರ್ ಗಳ ಸೌಲಭ್ಯ ಇದೆ. ಎರಡೂ ಸರ್ಜಿ ಆಸ್ಪತ್ರೆ ಸೇರಿ ವರ್ಷಕ್ಕೆ ಎರಡು ಲಕ್ಷ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರತಿದಿನಕ್ಕೆ ಸರಾಸರಿ 500ರಿಂದ 750 ರೋಗಿಗಳನ್ನು ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ವರ್ಷದಲ್ಲಿ 1800ರಿಂದ 2000 ವರೆಗೆ ಹೆರಿಗೆ ಆಗುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಬಂಜೆತನ ನಿವಾರಣೆ ಹೆಜ್ಜೆ

ಬಂಜೆತನ ನಿವಾರಣೆಯಿಂದ ಹಿಡಿದು (preconception) ಭ್ರೂಣ ಹಂತದಲ್ಲಿರುವ ಶಿಶುವಿನಿಂದ ಹಿಡಿದು ಹಿರಿಯ ವಯಸ್ಕರವರೆಗೂ ಸರ್ವ ರೀತಿಯ ಆರೋಗ್ಯ ಸೇವೆ ‘ಸರ್ಜಿ’ಯಲ್ಲಿ ಲಭ್ಯ, ಐವಿಎಫ್ ಸೆಂಟರ್ (ಬಂಜೆತನ ನಿವಾರಣಾ ಕೇಂದ್ರ) ಶೀಘ್ರವೇ

ಆರಂಭವಾಗುತ್ತಿದೆ. ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಲ್ಲ ವಿಭಾಗದಲ್ಲಿ ಒಟ್ಟು 30 ಕನ್ನಲೈಂಟ್ ವೈದ್ಯರು ಇದ್ದಾರೆ. ಮತ್ತೊಂದು ವಿಶೇಷವೆಂದರೆ 12 ಭಾಷೆಗಳಲ್ಲಿ ಪ್ರಿಸ್‌ಕ್ರಿಬ್ಬನ್ ಸೌಲಭ್ಯವಿದ್ದು, ರೋಗಿಗಳಿಗೆ ಅನುಕೂಲವಾಗುವ ಭಾಷೆಯಲ್ಲಿ ವೈದ್ಯರು ಬರೆದುಕೊಡುವುದು ವಿಶೇಷ, ಜಿಲ್ಲೆಯ ಆರೋಗ್ಯ ಕ್ಷೇತ್ರದ ಇತಿಹಾಸದಲ್ಲಿ ಇಷ್ಟು ವೇಗವಾಗಿ ಅಭಿವೃದ್ಧಿಗೊಂಡ ಶ್ರೇಯಸ್ಸು ಸರ್ಜಿ ಆಸ್ಪತ್ರೆಗೆ ಸಲ್ಲುತ್ತದೆ.

160 ಮಕ್ಕಳ ದತ್ತು

ಸಾಮಾಜಿಕ ಕಳಕಳಿ ಹೊಂದಿರುವ ಡಾ.ಧನಂಜಯ ಸರ್ಜಿ ಅವರು 2016ರಲ್ಲಿ ಮಕ್ಕಳ ದಿನಾಚರಣೆ ಸಂದರ್ಭ 160 ವಿಶೇಷಚೇತನ ಹಾಗೂ ಅನಾಥ ಮಕ್ಕಳನ್ನು ಆರೋಗ್ಯಕ್ಕೆ ಸಂಬಂಧಿ ಸಿದಂತೆ ದತ್ತು ಪಡೆದಿದ್ದಾರೆ. ಇತ್ತೀಚೆಗೆ ‘ಸರ್ಜಿ ಫೌಂಡೇಷನ್’ ಎಂಬ ದತ್ತು ಸಂಸ್ಥೆಯನ್ನು ಆರಂಭಿಸಿದ್ದಾರೆ. ಸಂಸ್ಥೆಯ ಮೂಲಕ ಆ ಎಲ್ಲ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ವಿಶೇಷ ಕಾಳಜಿ ವಹಿಸಿರುವುದು ಸರ್ಜಿ ಅವರ ಮಾನವೀಯ ಮೌಲ್ಯಕ್ಕೆ ಸಹಾಯದೊಂದಿಗೆ 2 ಸಾವಿರ ಮಕ್ಕಳಿಗೆ ಉಚಿತವಾಗಿ ಟೈಫಾಯಿಡ್ ವ್ಯಾಕ್ಸಿನೇಷನ್ ನೀಡಿರುವುದು ವಿಶೇಷವಾಗಿದೆ.

ಆಟೊ ಚಾಲಕರಿಗೆ ಹೆಲ್ತ್ ಕಾರ್ಡ್

ಆಯುಸ್ಮಾನ್ ಭಾರತ್ ಯೋಜನೆ ಅಡಿ ಸಾವಿರಾರು ಮಕ್ಕಳಿಗೆ ಚಿಕಿತ್ಸಾ ಸೌಲಭ್ಯ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯ 3000 ಆಟೋ ಚಾಲಕರಿಗೆ ಸರ್ಜಿ ಆಸ್ಪತ್ರೆಯಿಂದ ಹೆಲ್ತ್ ಕಾರ್ಡ್‌ಗಳನ್ನು ನೀಡಿ ಅವರ ಆರೋಗ್ಯದ ಜೊತೆ ನಿಂತಿದೆ. ಅಲ್ಲದೇ ಪ್ರತಿ ತಿಂಗಳು ಉಚಿತ ಆರೋಗ್ಯ ಅರಿವು ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ.

ಕೊರೊನಾ ಕೈ ಮೀರಿದಾಗ ಯುನಿಟಿ ಆಸ್ಪತ್ರೆ ಸಹಯೋಗದಲ್ಲಿ ಸಹಾಯವಾಣಿ ಮೂಲಕವೂ ಸೇವೆ ಸಲ್ಲಿಸಲಾಗಿದೆ.

ಸರ್ಜಿ ಕನಸು

ಕೇವಲ ಹಣವೇ ಮುಖ್ಯವಾಗಿರದೇ ಕೈಗೆಟುಕುವ ದರದಲ್ಲಿ ಉತ್ಕೃಷ್ಟ ಸೇವೆ ಜನರಿಗೆ ಲಭ್ಯವಾಗುವ ಮೂಲಕ ಶಿವಮೊಗ್ಗ ಒಂದು ದೊಡ್ಡ ಹೆಲ್ತ್ ಕ್ಲಬ್ ಆಗಬೇಕು. ಅಲ್ಲದೇ ಸರಕಾರ ಮಹಾನಗರ ಪಾಲಿಕೆ ಆಸ್ಪತ್ರೆಗಳನ್ನು ತೆರೆಯುವ ಮೂಲಕ ರೋಗಿಗಳಿಗೆ ಸಂಜೀವಿನಿ ಆಗಬೇಕು ಎಂಬುದು ಹಾಗೂ ಪದವೀಧರರಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಸಿಗುವಂತೆ ಸರ್ಕಾರದ ಮೂಲಕ ಈಡೆರೀಸಬೇಕೆಂಬುದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿಯವರ ಕನಸಾಗಿದೆ.

Previous Post

ಪುತ್ತೂರು : ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ!

Next Post

(ಜೂ.1-4) ದ.ಕ. ಜಿಲ್ಲೆಯಾದ್ಯಂತ ಮದ್ಯ ನಿಷೇಧ -ಜಿಲ್ಲಾಧಿಕಾರಿ ಆದೇಶ

OtherNews

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ಖಚಿತ ‘ಕಾರ್ಯಕರ್ತರ ಭಾವನೆಗೆ ಸ್ಪಂದಿಸಿ ನಿರ್ಧಾರ’ – ಪೋಸ್ಟರ್ ವೈರಲ್..!!
Featured

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ಖಚಿತ ‘ಕಾರ್ಯಕರ್ತರ ಭಾವನೆಗೆ ಸ್ಪಂದಿಸಿ ನಿರ್ಧಾರ’ – ಪೋಸ್ಟರ್ ವೈರಲ್..!!

July 12, 2026
ಪುತ್ತೂರು: ಗ್ರಾಮಾಂತರ ಯುವಮೋರ್ಚ ಪ್ರಧಾನ ಕಾರ್ಯದರ್ಶಿಯಾಗಿ ನಿತೀನ್ ಬೊಡ್ಡೊಣಿ ನೇಮಕ.!!
ರಾಜಕೀಯ

ಪುತ್ತೂರು: ಗ್ರಾಮಾಂತರ ಯುವಮೋರ್ಚ ಪ್ರಧಾನ ಕಾರ್ಯದರ್ಶಿಯಾಗಿ ನಿತೀನ್ ಬೊಡ್ಡೊಣಿ ನೇಮಕ.!!

July 7, 2026
ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವಕ್ತಾರರಾಗಿ ರಾಜೇಶ್ ಬನ್ನೂರು, ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್..!!
ರಾಜಕೀಯ

ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವಕ್ತಾರರಾಗಿ ರಾಜೇಶ್ ಬನ್ನೂರು, ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್..!!

July 5, 2026
“ವಿಜಯೇಂದ್ರನನ್ನು ಕಿತ್ತು ಬಿಸಾಕಿ”: ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆಡಿಯೋ..!!
ಬೆಂಗಳೂರು

“ವಿಜಯೇಂದ್ರನನ್ನು ಕಿತ್ತು ಬಿಸಾಕಿ”: ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆಡಿಯೋ..!!

June 29, 2026
ನನಗೂ, ಡಿಕೆ ಶಿವಕುಮಾರ್​ಗೂ ರಾಜಕೀಯ, ವ್ಯವಾಹಾರಿಕ ಸಂಬಂಧ ಇಲ್ಲ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ..!!
ಬೆಳ್ತಂಗಡಿ

ನನಗೂ, ಡಿಕೆ ಶಿವಕುಮಾರ್​ಗೂ ರಾಜಕೀಯ, ವ್ಯವಾಹಾರಿಕ ಸಂಬಂಧ ಇಲ್ಲ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ..!!

June 26, 2026
ಆಣೆ – ಪ್ರಮಾಣಕ್ಕೆ ಬ್ರೇಕ್ ಬೆನ್ನಲ್ಲೇ ಧರ್ಮಸ್ಥಳಕ್ಕೆ ವಿಜಯೇಂದ್ರ..!!
ಬೆಂಗಳೂರು

ಆಣೆ – ಪ್ರಮಾಣಕ್ಕೆ ಬ್ರೇಕ್ ಬೆನ್ನಲ್ಲೇ ಧರ್ಮಸ್ಥಳಕ್ಕೆ ವಿಜಯೇಂದ್ರ..!!

June 25, 2026

Leave a Reply Cancel reply

Your email address will not be published. Required fields are marked *

Recent News

ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬೆಂಕಿಗಾಹುತಿ; 37 ಪ್ರಯಾಣಿಕರು ಪಾರು..!

ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬೆಂಕಿಗಾಹುತಿ; 37 ಪ್ರಯಾಣಿಕರು ಪಾರು..!

September 6, 2026
(ಸೆ.06) : ಪ್ರಶಸ್ತಿ ವಿಜೇತ ಯುವಕ ಮಂಡಲ (ರಿ.) ವಿಟ್ಲ: 49 ನೇ ವರ್ಷದ ಮೊಸರುಕುಡಿಕೆ..!

(ಸೆ.06) : ಪ್ರಶಸ್ತಿ ವಿಜೇತ ಯುವಕ ಮಂಡಲ (ರಿ.) ವಿಟ್ಲ: 49 ನೇ ವರ್ಷದ ಮೊಸರುಕುಡಿಕೆ..!

September 5, 2026
ಪುತ್ತೂರು : ಮೃತಪಟ್ಟ ವಿದ್ಯಾರ್ಥಿ ಶ್ರಮಿಕ್ ರೈ: ಅಂತಿಮ ದರ್ಶನ ಪಡೆದ ಶಾಸಕ ಅಶೋಕ್ ರೈ..!

ಪುತ್ತೂರು : ಮೃತಪಟ್ಟ ವಿದ್ಯಾರ್ಥಿ ಶ್ರಮಿಕ್ ರೈ: ಅಂತಿಮ ದರ್ಶನ ಪಡೆದ ಶಾಸಕ ಅಶೋಕ್ ರೈ..!

September 5, 2026
ಪುತ್ತೂರು: ವಿದ್ಯಾರ್ಥಿ ಮೃತ್ಯು ..!!

ಪುತ್ತೂರು: ವಿದ್ಯಾರ್ಥಿ ಮೃತ್ಯು ..!!

September 5, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.