ವಿಟ್ಲ: ಪ್ರಶಸ್ತಿ ವಿಜೇತ ಯುವಕ ಮಂಡಲ (ರಿ.) ವಿಟ್ಲ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 49 ನೇ ವರ್ಷದ ಮೊಸರು ಕುಡಿಕೆ ಉತ್ಸವ ಸೆ.06 ರಂದು ಪಿಎಂಶ್ರೀ ಸರಕಾರಿ ಪ್ರೌಢ ಶಾಲೆ RMSA ವಿಟ್ಲ ಕೀರ್ತಿಶೇಷ ಶ್ರೀ ಕೆ ವೆಂಕಟೇಶ್ ಭಟ್, ವಿಟ್ಲ ಸಭಾಂಗಣ ಇಲ್ಲಿ ನಡೆಯಲಿದೆ.
ಬೆಳಗ್ಗೆ 9.30 ಕ್ಕೆ ದೀಪ ಪ್ರಜ್ವಲನೆ ಬಳಿಕ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳು, ಹಗ್ಗಜಗ್ಗಾಟ, ಕಬಡ್ಡಿ ಪಂದ್ಯಾಟ, ಸಭಾ ಕಾರ್ಯಕ್ರಮ ನಡೆಯಲಿದ್ದು ರಾತ್ರಿ 7.30 ಕ್ಕೆ ಆಂಟಿ ಬೋಕ ಅಂಕಲ್ ನಾಟಕ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.





























