ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಸ್ವರ್ಣ ಕವಚ ನಿರ್ಮಾಣಕ್ಕೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಆ.30ರಂದು 2 ಗ್ರಾಂ ಸ್ವರ್ಣ ಸಮರ್ಪಣೆ ಮಾಡಿದರು.
ಶಕುಂತಳಾ ಶೆಟ್ಟಿ ಮತ್ತು ಅವರ ಮಕ್ಕಳು ಬೆಳಗ್ಗೆ ದೇವಳಕ್ಕೆ ಆಗಮಿಸಿ ಸ್ವರ್ಣ ಸಮರ್ಪಣೆ ಮಾಡಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಪ್ರಸಾದ ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ದೇವಳದ ಗೌರವಾರ್ಥ ಶಾಲು ಹೊದಿಸಿ ಗೌರವಿಸಿದರು.




























