ಯಾದವ ಸಭಾ ಪ್ರಾದೇಶಿಕ ಸಮಿತಿ ಆರ್ಲಪದವು- ಪಾಣಾಜೆ ನೇತೃತ್ವದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಪ್ರಯುಕ್ತ ವಿಂಶತಿ ಸಂಭ್ರಮೋತ್ಸವ ಸೆ.03, 04 ರಂದು ಆರ್ಲಪದವು ರಣಮಂಗಲ ಸಭಾಭವನದಲ್ಲಿ ನಡೆಯಲಿದೆ.
ಸೆ.3ರಂದು ಸಂಜೆ 6ಕ್ಕೆ ಆರ್ಲಪದವು ಶಾಲಾ ಬಳಿಯಿಂದ ಕುಣಿತ ಭಜನೆ, ಸಿಂಗಾರಿ ಮೇಳ, ಶ್ರೀಕೃಷ್ಣ ಲೀಲೋತ್ಸವ, ಸುಡುಮದ್ದು ಪ್ರದರ್ಶನ ಸಹಿತ ಶ್ರೀಕೃಷ್ಣದೇವರ ಬೆಳ್ಳಿ ಛಾಯಾಬಿಂಬದ ಶೋಭಾಯಾತ್ರೆ ಹೊರಟು, ರಾಜಬೀದಿಯಲ್ಲಿ ಸಂಚರಿಸಿ, ರಾತ್ರಿ 7ಕ್ಕೆ ಶ್ರೀಕೃಷ್ಣದೇವರ ರಜತ ಛಾಯಾ ಬಿಂಬವನ್ನು ರಣಮಂಗಲ ಸಭಾಭವನದ ಬಳಿ ವೈಭವೋಪೇತವಾಗಿ ಸ್ವಾಗತಿಸಲಾಗುವುದು. 7.15ಕ್ಕೆ ಸಾಮೂಹಿಕ ಪ್ರಾರ್ಥನೆ, ದೀಪಪ್ರಜ್ವಲನೆ, 7.30ಕ್ಕೆ ಸಭಾ ಕಾರ್ಯಕ್ರಮ , 8ಕ್ಕೆ ಶುದ್ಧಿಕಲಶಾದಿಗಳು ಮತ್ತು ಪ್ರಸಾದ ವಿನಿಯೋಗ 830ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಸೆ.4ರಂದು ಬೆಳಗ್ಗೆ 7ರಿಂದ ಪುಣ್ಯಾಹ ಗಣಪತಿ ಹವನ, ಷಡಕ್ಷರ ಹವನ, 8ಕ್ಕೆ ಶ್ರೀದೇವರ ಪ್ರತಿಷ್ಠೆ, ಹವನ ಪೂರ್ಣಾಹುತಿ, 8.30ಕ್ಕೆ ಉಪಾಹಾರ, 9ರಿಂದ ಭಜನಾ ಕಾಠ್ಯಕ್ರಮ, 10 ರಿಂದ ಮಕ್ಕಳು, ಮಹಿಳೆಯರು, ಪುರುಷರ ಕ್ರೀಡಾಕೂಟ, 10.30ಕ್ಕೆ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ, 11ಕ್ಕೆ ಕಲೋಕ್ತಪೂಜೆ, ಮಧ್ಯಾಹ್ನ 12.30ರಿಂದ ಪ್ರಸನ್ನಪೂಜೆ, ಪಲ್ಲಪೂಜೆ, ಗೋಪೂಜೆ, ಪ್ರಸಾದ ವಿತರಣೆ, 1ರಿಂದ ಅನ್ನಸಂತರ್ಪಣೆ, 1.30ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾಠ್ಯಕ್ರಮ, ಸಂಜೆ 3ರಿಂದ ಧಾರ್ಮಿಕ ಸಭೆ, 6 ರಿಂದ ದೀಪಾರಾಧನೆ, ಸಂಕೀರ್ತನ ಸೇವೆ, ಷೋಡಶೋಪಚಾರ ಪೂಜೆ, ಅಷ್ಟಾವಧಾನ ಸೇವೆ ಅರ್ಥ್ಯ ಪ್ರದಾನ ಸೇವೆ ಸಹಿತ ಶ್ರೀಕೃಷ್ಣ ದೇವರಿಗೆ ತೊಟ್ಟಿಲೋತ್ಸವ, ಪ್ರಸಾದ ವಿತರಣೆ, 9ರಿಂದ ವೈವಿಧ್ಯ ಖಾದ್ಯಗಳ ಸವಿರುಚಿಯ ಉಪಾಹಾರ ವಿತರಣೆಯೊಂದಿಗೆ ವಿಂಶತಿ ಸಂಭ್ರಮೋತ್ಸವ ಸಂಪನ್ನಗೊಳ್ಳಲಿದೆ.





























