ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಸಾಮೆತಡ್ಕ ನಿವಾಸಿ ನಂದನ್ ಇವರಿಗೆ “ಅರುಣ ಸಾರಥಿ” ಸಂಘಟನೆಯ ವತಿಯಿಂದ ‘10,000 ರೂಪಾಯಿ’ ಧನಸಹಾಯವನ್ನು “ಪುತ್ತಿಲ ಪರಿವಾರ ಸೇವಾ ಟ್ರಸ್ಟ್”ನ ಸಂಚಾಲಕರಾದ “ಅರುಣ್ ಕುಮಾರ್ ಪುತ್ತಿಲ’ ಅವರ ಉಪಸ್ಥಿತಿಯಲ್ಲಿ “ಹಿಂದವಿ” ಕಛೇರಿಯಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ “ಪುತ್ತಿಲ ಪರಿವಾರ ಸೇವಾ ಟ್ರಸ್ಟ್”ನ ಸಂಘಟನಾ ಕಾರ್ಯದರ್ಶಿ ಉಮೇಶ್ ಕೋಡಿಬೈಲು,ಕಾರ್ಯದರ್ಶಿ ಪ್ರಜ್ವಲ್ ಘಾಟೆ,ಉಪಾಧ್ಯಕ್ಷರಾದ ರಾಜು ಶೆಟ್ಟಿ ಮತ್ತು ಅರುಣ ಸಾರಥಿ ಆಟೋ ಚಾಲಕ ಸಂಘಟನೆಯ ಪ್ರಮುಖರಾದ ಸಂದೇಶ್ ನಾೖಕ್ ಕೆಯ್ಯೂರು,ಸಚಿನ್ ವಳತ್ತಡ್ಕ,ಸುರೇಶ್ ಬಂಗಾರಡ್ಕ,ಯೋಗೀಶ್ ಸಂಪ್ಯ,ಸ್ವಸ್ತಿಕ್ ಗೌಡ ತಾರಿಗುಡ್ಡೆ, ಮೊದಲಾದವರು ಉಪಸ್ಥಿತರಿದ್ದರು
“ಅರುಣ ಸಾರಥಿ” ಸಂಘಟನೆ ವತಿಯಿಂದ ಈವರೆಗೆ ಒಟ್ಟು 2,40,000 ರೂಪಾಯಿ ಧನಸಹಾಯವನ್ನು ಅನಾರೋಗ್ಯದಲ್ಲಿರುವವರಿಗೆ ನೀಡಲಾಗಿದೆ.





























