ಬೆಳ್ಳಾರೆ: ಎಲಿಮಲೆಯಿಂದ ಪೈಲಾರು–ಚೊಕ್ಕಾಡಿ–ಬೆಳ್ಳಾರೆ–ಪೆರ್ಲಂಪಾಡಿ ಮೂಲಕ ಪುತ್ತೂರಿಗೆ ಸಂಚರಿಸುವ ಸರ್ಕಾರಿ ಬಸ್‌ವೊಂದು ರಸ್ತೆ ಬದಿಗೆ ಜಾರಿ, ಮೆಸ್ಕಾಂ ಅಂಡರ್‌ಗ್ರೌಂಡ್ ಕೇಬಲ್ ಅಳವಡಿಸಲಾಗಿದ್ದ ಕಣಿಯಲ್ಲಿ ಸಿಲುಕಿದ ಘಟನೆ ಆ.31ರ ಬೆಳಗ್ಗೆ ನಡೆದಿದೆ.
ಬಸ್ ರಸ್ತೆ ಬದಿಗೆ ಸರಿದ ಪರಿಣಾಮ ಅದರ ಒಂದು ಚಕ್ರ ಕೇಬಲ್ ಅಳವಡಿಸಿದ್ದ ಕಣಿಯಲ್ಲಿ ಹೂತುಹೋಗಿದ್ದು, ಬಸ್ ಮುಂದಕ್ಕೆ ಚಲಿಸಲಾಗದೆ ನಿಂತಿತು. ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಪರದಾಡುವಂತಾಯಿತು.
ಪೆರ್ಲಂಪಾಡಿ ಮೂಲಕ ಪುತ್ತೂರಿಗೆ ಸಂಚರಿಸುವ ಏಕೈಕ ಬಸ್ ಇದಾಗಿರುವುದರಿಂದ,
ಬಸ್ ಸಂಚಾರಕ್ಕೆ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿದಂತೆ ನಿತ್ಯ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.




























