ಪುತ್ತೂರು : ನಾಳೆ (ಜೂ. 9) ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಕಾರ್ಯಕ್ರಮದ ನೇರಪ್ರಸಾರ ಕಲ್ಲೇಗ ಭಾರತಾ ಮಾತಾ ಸಭಾಭವನದಲ್ಲಿ ನಡೆಯಲಿದೆ.
ನಾಳೆ ಸಂಜೆ 6.30ರಿಂದ ನೇರಪ್ರಸಾರ ಆರಂಭಗೊಳ್ಳಲಿದ್ದು, ಕಾರ್ಯಕ್ರಮದ ಬಳಿಕ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.