ಈಶ್ವರಮಂಗಲ ಪೇಟೆಯ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸಮಾಡುತಿದ್ದ ಹಿಂದು ಸಹೋದರಿಯ ಮೇಲೆ ಅನ್ಯಕೋಮಿನ ಕಾಮುಕನೊಬ್ಬ ಮಾನಹಾನಿಗೆ ಯತ್ನಿಸಿದ ಘಟನೆಯನ್ನು ಹಿಂದು ಜಾಗರಣ ವೇದಿಕೆ ಈಶ್ವರಮಂಗಲ ಘಟಕವು ತೀವ್ರವಾಗಿ ಖಂಡಿಸುತ್ತದೆ.ಈ ಕೃತ್ಯವೆಸಗಿರುವ ಆರೋಪಿಯನ್ನು ತಕ್ಷಣ ಬಂಧಿಸಿ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಿಂದು ಜಾಗರಣ ವೇದಿಕೆ ಅಭಿನಂದನೆ ಸಲ್ಲಿಸುತ್ತದೆ ಎಂದು ಹಿಂ.ಜಾ.ವೇ ಈಶ್ವರಮಂಗಲ ಸಂಪರ್ಕ ಪ್ರಮುಖ್ ಪ್ರವೀಶ್ ಬಂಟುಕಲ್ಲು ಹೇಳಿದರು.
ಹಿಂದೂ ಸಮಾಜದ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಮತೀಯ ಶಕ್ತಿಗಳು ದೇಶದಾದ್ಯಂತ ಲವ್ ಜಿಹಾದ್,ಸೆಕ್ಸ್ ಜಿಹಾದ್ ಗಳತಂಹ ನೀಚ ಕ್ರತ್ಯಗಳನ್ನು ಎಸಗುತ್ತಿರುವ ಘಟನೆಗಳು ನಮಗೆಲ್ಲ ಗೊತ್ತೇ ಇದೆ. ಅದಕ್ಕೆ ಸಾಕ್ಷಿಯೇ ಇಂದು ಈಶ್ವರಮಂಗಲದಲ್ಲಿ ನಡೆದಂತಹ ಘಟನೆ. ಅನ್ಯಕೋಮಿನ ವ್ಯಕ್ತಿಯ ಮಾಲಕತ್ವದ ಸಂಸ್ಥೆಯಲ್ಲಿ ಕೆಲಸ ಮಾಡುವ ಹಿಂದು ಯುವತಿಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಇದು ಮೊದಲೇನಲ್ಲ ಇದಕ್ಕಿಂತ ಹಿಂದೆ ಇಂತಹ ಹಲವಾರು ಘಟನೆಗಳು ನಡೆದ ಉದಾಹರಣೆಗಳು ಇವೆ. ಆದ್ದರಿಂದ ಅನ್ಯಕೋಮಿನ ಒಡೆತನವಿರುವ ಸಂಸ್ಥೆಗಳಲ್ಲಿ ಕೆಲಸ ಮಾಡುವ ಹಿಂದು ಯುವತಿಯರು ಎಚ್ಚರವಹಿಸುವ ಅಗತ್ಯತೆ ಇದೆ ಎಂದರು.
ಈಶ್ವರಮಂಗಲದಲ್ಲಿ ನಡೆದ ಘಟನೆಯು ಇಡೀ ಹಿಂದೂ ಸಮಾಜವೇ ತಲೆ ತಗ್ಗಿಸುವಂತಹ ಘಟನೆಯಾಗಿದೆ.ಆದ್ದರಿಂದ ಇಡೀ ಹಿಂದು ಸಮಾಜವೇ ಜಾತಿ, ಮತ, ಪಕ್ಷ, ಭೇದ ಮರೆತು ನಾವೆಲ್ಲ ಹಿಂದು ನಾವೆಲ್ಲ ಒಂದು ಅನ್ನುವ ಭಾವನೆಯಲ್ಲಿ ಹಿಂದು ಸಮಾಜದ ರಕ್ಷಣೆಗೋಸ್ಕರ ಪಣತೊಡಬೇಕಾಗಿದೆ. ಇಲ್ಲವಾದರೆ ಇಂದು ಈಶ್ವರಮಂಗಲ ಪೇಟೆಯಲ್ಲಿ ಹಾಡುಹಗಲೇ ನಡೆದ ಘಟನೆಯು ಮುಂದಿನ ದಿನಗಳಲ್ಲಿ ನಮ್ಮ ಮನೆಯ ಹೆಣ್ಣು ಮಕ್ಕಳ ಮೇಲೆಯೂ ನಡೆಯಲ್ಲ ಅಂತ ಹೇಳಲು ಸಾಧ್ಯವೇ…???ಹಿಂದು ಜಾಗರಣ ವೇದಿಕೆಯು ಹಲವಾರು ವರ್ಷಗಳಿಂದ ಈಶ್ವರಮಂಗಲ ಪರಿಸರದಲ್ಲಿ ಮತಾಂಧರು ನಡೆಸುವ ಅಕ್ರಮ ಚಟುವಟಿಗಳ ವಿರುದ್ಧ, ಅಕ್ರಮ ಗೋ ಸಾಗಾಟ, ಲವ್ ಜಿಹಾದ್, ಲೆಂಡ್ ಜಿಹಾದ್,ವ್ಯಾಪಾರಿ ಜಿಹಾದ್ ಗಳ ವಿರುದ್ಧ ಹೋರಾಟ ನಡೆಸುತ್ತ ಬರುತ್ತಿದೆ.ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಈಶ್ವರಮಂಗಲ ಪರಿಸರದಲ್ಲಿ ನಡೆದರೆ ಅವುಗಳನ್ನು ಮಟ್ಟಹಾಕಲು ಹಿಂದು ಜಾಗರಣ ವೇದಿಕೆ ಈಶ್ವರಮಂಗಲ ಸದಾ ಸನ್ನದ್ದವಾಗಿದೆ. ಆದುದರಿಂದ ಸಂಬಂಧಪಟ್ಟ ಪೊಲೀಸ್ ಇಲಾಖೆಯವರು ಇಂತಹ ಕೋಮು ಭಾವನೆಯನ್ನು ಕೆರಳಿಸುವ ಮತಾಂಧ ಶಕ್ತಿಗಳನ್ನು ತಕ್ಷಣವೇ ಮಟ್ಟ ಹಾಕಬೇಕೆಂದು ಹಿಂದು ಜಾಗರಣ ವೇದಿಕೆ ಆಗ್ರಹಿಸುತ್ತದೆ. ಇಲ್ಲವಾದರೆ ಮುಂದಿನ ದಿನ ಈಶ್ವರಮಂಗಲ ಪರಿಸರದಲ್ಲಿ ಕೋಮು ಗಲಭೆ ಸಾಮಾಜಿಕ ಅಶಾಂತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹೇಳಿದರು.