ಪುತ್ತೂರು : ಕೃಷಿ ಯಂತ್ರೋಪಕರಣಗಳ ಮಾರಾಟ ಹಾಗೂ ಸೇವಾ ಮಳಿಗೆ ‘ಸಿಝ್ಲರ್ ಅಗ್ರಿಝೋನ್’ ಬೊಳ್ವಾರಿನಲ್ಲಿನ ನ್ಯೂ ಅಂಕಲ್ ಸ್ವೀಟ್ಸ್ ಮುಂಭಾಗದ ಕಟ್ಟಡದಲ್ಲಿ ಶುಭಾರಂಭಗೊಂಡಿತು.

ಸಿಝ್ಲರ್ ಫ್ರೆಂಡ್ಸ್ ಸಂಸ್ಥೆಯ ಮುಖ್ಯಸ್ಥ ಪ್ರಸನ್ನ ಕುಮಾರ್ ಶೆಟ್ಟಿ ರವರ ತಾಯಿ ಸುಲೋಚನಾ ಎನ್. ಶೆಟ್ಟಿ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಅರ್ಚಕರಾದ ಜಯರಾಮ ಕೆದಿಲಾಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಪ್ರಸನ್ನಕುಮಾರ್ ಶೆಟ್ಟಿ ಸಹೋದರರಾದ ಸುಳ್ಯದಲ್ಲಿ ಎಸಿಎಫ್ ಆಗಿರುವ ಪ್ರವೀಣ್ ಶೆಟ್ಟಿ, ಪತ್ನಿ ಪ್ರತಿಮಾ ಪಿ.ಶೆಟ್ಟಿ, ಪುತ್ರಿಯರಾದ ಹಿತಾಲಿ ಹಾಗೂ ರೀಶಾ, ಸಂಸ್ಥೆಯ ಮಾರ್ಕೆಟಿಂಗ್ ಹೆಡ್ ಹೇಮಂತ್ ಕುಮಾರ್ ಬೆಂಗಳೂರು, ಸದಾಶಿವ ರೈ (ಕೃಷಿ ಏಜೆನ್ಸೀಸ್), ರಾಕೇಶ್ ಡಿಸೋಜಾ (ಅಗ್ರಿಝೋನ್), ಸಂತೋಷ್ ಕೆ, ರಫೀಕ್ ಸಿಝ್ಲರ್, ಕಟ್ಟಡ ಮಾಲಕ ಇಮ್ರಾಜ್ ಬೊಳ್ವಾರು, ಸಂಸ್ಥೆಯ ಸಿಬ್ಬಂದಿಗಳಾದ ನಳಿನಿ, ವಿಜೇತ, ಬಾಲಕೃಷ್ಣ ಮದಕ, ಅರುಣ್ ನಗರ, ಹೇಮಂತ್ ಮಾಡಾವು, ಹರ್ಷ ಮಿತ್ತೂರು ಸಹಿತ ಹಲವರು ಉಪಸ್ಥಿತರಿದ್ದರು.
ಸಂಸ್ಥೆಯ ಉದ್ಘಾಟನೆಯ ಪ್ರಯುಕ್ತ ರಿಯಾಯಿತಿ ದರದಲ್ಲಿ ಕೃಷಿ ಯಂತ್ರಗಳು ದೊರಕಲಿದೆ.
ವಿವಿಧ ಮಾದರಿಯ ಔಷಧಿ ಸಿಂಪಡಿಸುವ ಯಂತ್ರ(ಪವರ್ ಸ್ಪೇಯರ್ಸ್), ಮರ ಕೊಯ್ಯುವ ಯಂತ್ರ, ಬ್ಯಾಟರಿ ಚಾಲಿತ ಸ್ಟ್ರೇಯರ್, ಗುಂಡಿ ತೋಡುವ ಯಂತ್ರ, ಅಗತೆ ಮಾಡುವ ಯಂತ್ರ, ವಿವಿಧ ಮಾದರಿಯ ಕಳೆ ಕೊಚ್ಚುವ ಯಂತ್ರಗಳು, ವಾಟರ್ ಪಂಪ್ ಸೆಟ್, ಕೊಟ್ಟಿಗೆ ತೊಳೆಯುವ ಯಂತ್ರ ಹಾಗೂ ಇನ್ನಿತರ ಕೃಷಿ ಯಂತ್ರೋಪಕರಣಗಳು ದೊರೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.



























