ಪುಂಜಾಲಕಟ್ಟೆ ಠಾಣಾ ಸಿಬ್ಬಂದಿಯೂ ಜೂ.೧ ರಂದು ದಾಳಿ ನಡೆಸಿ ಬೆಳ್ತಂಗಡಿ ತಾಲ್ಲೂಕಿನ ಗರ್ಡಾಡಿ ಗ್ರಾಮದ ಕಾಣೇಲುವಿನ ಭೋಜ ಪೂಜಾರಿ ಅವರ ನಿವಾಸದಿಂದ ವಿವಿಧ ನಮೂನೆಯ 42,000 ರೂ. ಮೌಲ್ಯದ 82.53 ಲೀಟರ್ ಮದ್ಯ ಮತ್ತು 58.68 ಲೀಟರ್ ಬಿಯರ್ ಹಾಗೂ 14,125 ರೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ಆರೋಪಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.ಕರ್ನಾಟಕ ಅಬಕಾರಿ ಕಾಯ್ದೆ ಸೆಕ್ಷನ್ 32 ಮತ್ತು 34 ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ