ಮುಂಡೂರು : ಕೋವಿಡ್ ನಿಂದಾಗಿ ಮೃತ ಪಟ್ಟ ಮುಂಡೂರು ಕಂಪ ನಿವಾಸಿ ಗುರುವ ರವರ ಮನೆಗೆ ಮುಂಡೂರ್ ಹಾಲು ಉತ್ಪಾದಕರ ಸಂಘದ ಅದ್ಯಕ್ಷರು, ಸದಸ್ಯರು ಮತ್ತು ಊರಿನ ಪ್ರಮುಖರ ನಿಯೋಗ ಭೇಟಿ ಮಾಡಿತು.
ಈ ಸಂದರ್ಭದಲ್ಲಿ ಮುಂಡೂರ್ ಹಾಲು ಉತ್ಪಾದಕರ ಸಂಘದ ಹಾಗೂ ಅಧ್ಯಕ್ಷರ ವತಿಯಿಂದ ಗುರುವ ರವರ ಕುಟುಂಬಕ್ಕೆ ಆರ್ಥಿಕ ಧನಸಹಾಯ ಅಧ್ಯಕ್ಷರ ಉಪಾಧ್ಯಕ್ಷ ರ ಉಪಸ್ಥಿತಿಯಲ್ಲಿ ಕಾರ್ಯದರ್ಶಿ ಜಿನ್ನಪ್ಪ ಸಾಲ್ಯಾನ್ ಮೃತ ನ ಪತ್ನಿ ಗಿರಿಜಾ ಅವರಿಗೆ ಹಸ್ತಾಂತರ ಮಾಡಿದರು. ಅಧ್ಯಕ್ಷ ರಾದ ಶ್ರೀಕಾಂತ್ ಆಚಾರ್ ವೈಯುಕ್ತಿಕವಾಗಿ ನಗದು ನೀಡಿದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಉಮೇಶ ಗುತ್ತಿನಪಾಲು. ನಿರ್ದೇಶಕರಾದ ಅನಿಲ್ ಕಣ್ಣರ್ನೂಜಿ. ಸಂಘದ ಮಾಜಿ ಉಪಾಧ್ಯಕ್ಷರು ಸುಧೀರ್ ಶೆಟ್ಟಿ. ಪಂಚಾಯತ್ ಸದಸ್ಯ ಅಶೋಕ್ ಪುತ್ತಿಲ. ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ ಉಪಸ್ಥಿತರಿದ್ದರು. ಮೃತ ಗುರುವ ನ ಮಗ ಮತ್ತು ಕುಟುಂಬದವರಿಗೂ ಸಾಂತ್ವನ ಹೇಳಿ ಯಾವುದೇ ಸಂದರ್ಭದಲ್ಲಿ ನಿಮ್ಮ ಜೊತೆ ನಾವಿದ್ದೇವೆ ಎಂದರು. ಮೃತರ ಉತ್ತರ ಕ್ರಿಯೆ ಕೂಡ ಕುಟುಂಬದವರೊಡನೆ ಮಾತನಾಡಿ ಮುಂದುವರಿಸುವಂತೆ ಸಲಹೆ ನೀಡಿದರು.