ಪುತ್ತೂರು : ಮನ್ಮಿತ್ ರೈ ಅನ್ನುವಂಥದ್ದು ಬರಿಯ ಹೆಸರಲ್ಲ. ಇದು ನಿಸ್ವಾರ್ಥ ಸೇವೆಯ ದ್ಯೋತಕ. ತನ್ನಲ್ಲಿರುವುದನ್ನ ಪರರಿಗೆ ನೀಡಿ ಸಂತಸವನ್ನು ಕಾಣುವ ಎಲ್ಲರ ನೆಚ್ಚಿನ ಮನ್ಮಿತ್ ರೈ ಅವರು ಇದೀಗ ಕೋವಿಡ್ ತುರ್ತು ಸಂದರ್ಭದಲ್ಲಿಯೂ ಅಸಹಾಯಕರ ಪಾಲಿಗೆ ಸಹಾಯಹಸ್ತವನ್ನು ಚಾಚುತ್ತಿದ್ದಾರೆ.
ಇದೀಗ ಮನ್ಮಿತ್ ರೈ ಅವರು ಪುತ್ತೂರು ಭಾಗದ ಹಲವು ಮನೆಗಳಿಗೆ ಅಕ್ಕಿ, ಸಕ್ಕರೆ, ಮೆಣಸು, ಕೊತ್ತಂಬರಿ, ಚಾ ಹುಡಿ, ಅಲಸಂಡೆ ಬೀಜ, ತೊಗರಿ ಬೇಳೆ, ಹೆಸರು ಬೇಳೆ, ಉಪ್ಪು, ಸಾಂಬಾರು ಹುಡಿ, ತರಕಾರಿ, ಔಷಧೀಯ ಖರ್ಚು ಸೇರಿದಂತೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು. ಒಟ್ಟು 250 ಕಿಟ್, ಇದರ ಜತೆಗೆ ಶಾಸಕರ ವಾರ್ಡ್ ರೂಮಿಗೆ 120 ಪಿಪಿಐ ಕಿಟ್, ಸೇವಾಭಾರತಿ ಬಂಟ್ವಾಳಕ್ಕೆ 50 ಪಿಪಿಐ ಕಿಟ್ ಗಳನ್ನು ನೀಡಿದ್ದಾರೆ. ಇಷ್ಟು ಮಾತ್ರವಲ್ಲದೇ ತಾಲೂಕಿನ ಎಲ್ಲಾ ಆರಕ್ಷಕ ಠಾಣೆಗಳಿಗೆ ಸ್ಯಾನಿಟೈಸರ್, ಮಾಸ್ಕ್ ಹಾಗೂ ಫೇಸ್ ಶೀಲ್ಡ್ ಗ್ಲೌಸ್ ಗಳನ್ನು ವಿತರಿಸಿದ್ದಾರೆ.
ಇದಾಗಿಯೂ ತನ್ನ ಸೇವಾ ಕಾರ್ಯಗಳನ್ನು ಇಲ್ಲಿಗೇ ಮೊಟಕುಗೊಳಿಸದೆ ಮುಂದೆಯೂ ತನ್ನಿಂದಾಗುವ ನೆರವನ್ನು ನೀಡುವ ಭರವಸೆಯನ್ನು ಮನ್ಮಿತ್ ರೈ ಅವರು ನೀಡಿದ್ದು ಇವರ ಮನಸಿನಲ್ಲಿ ನೊಂದವರಿಗೆ ನೆರವಾಗುವ ಆಶಾಭಾವ ಇನ್ನೂ ಶಾಶ್ವತವಾಗಿದೆ.