ಮಂಗಳೂರು : ಕೊಣಾಜೆ ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಕೇರಳಕ್ಕೆ ನಿಷೇಧಿತ ಮಾದಕ(ಎಂಡಿಎಂಎ ಮಾತ್ರೆ ) ವಸ್ತು ಅಕ್ರಮವಾಗಿ ಸಾಗಿಸುತ್ತಿದ್ದ ಉಪ್ಪಳದ ಮೂವರನ್ನು ಜೂ. 4 ಶುಕ್ರವಾರ ಕೊಣಾಜೆಯ ಗಣೇಶ್ ಮಹಲ್ ನಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಉಪ್ಪಳ ಗೇಟ್ ನಿವಾಸಿಗಳಾದ ಮೊಹಮ್ಮದ್ ಮುನಾಫ್, ಮೊಹಮ್ಮದ್ ಮುಝಾಂಬಿಲ್, ಮತ್ತು ಅಹ್ಮದ್ ಮಸೂಕ್ ಎಂದು ಗುರುತಿಸಲಾಗಿದೆ. ಇವರಿಂದ 10 ಲಕ್ಷ ಮೌಲ್ಯದ 170 ಎಂಡಿಎಂಎ ಮಾತ್ರೆಯನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ.
ಬಂಧಿತರಲ್ಲಿ ಮುನಾಫ್ ಬಿಬಿಎ ಓದಿದ್ದು , ಮುಝಾಂಬಿಲ್ ಬೆಂಗಳೂರಿನ ನೆಲಮಂಗಲ ಸ್ಪೋಟ್ಸ್ ಶಾಪ್ ನಲ್ಲಿ ಹಾಗೂ ಮಸೂಕ್ ಜೆ.ಪಿ.ನಗರದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಗಳು ಬೆಂಗಳೂರಿನಲ್ಲಿ ಆಫ್ರಿಕನ್ ಪ್ರಜೆಯೊಬ್ಬರಿಂದ ಡ್ರಗ್ಸ್ ಪಡೆದು ಅದನ್ನು ಮಂಗಳೂರು, ಉಪ್ಪಳ ಮತ್ತು ಕಾಸರಗೋಡಿನ ಪ್ರದೇಶಗಳಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕೊಣಾಜೆ ಗಣೇಶ್ ಮಹಲ್ ನಲ್ಲಿ ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಮೊಬೈಲ್ ಪೋನ್, ಕಾರು ಸೇರಿ ಒಟ್ಟು 17,37,000 ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.
“ಅಪಾರ ಪ್ರಮಾಣದ ಎಂಡಿಎಂಎಯ ನಿಷೇಧಿತ ಡ್ರಗ್ಸ್ ವಶಪಡಿಸಿಕೊಳ್ಳಲಾದ ಹಿನ್ನಲೆಯಲ್ಲಿ ಆರೋಪಿಗಳು ಮಾರಾಟ ಮಾಡುವ ಗ್ರಾಹಕರ ಬಗ್ಗೆಯೂ ವಿಸ್ತಾರವಾದ ತನಿಖೆ ನಡೆಸುತ್ತೇವೆ. ಕೆಲವರು ಬೆಂಗಳೂರಿನಲ್ಲಿ ಪೂರ್ಣ ಸಮಯದ ವ್ಯವಹಾರವಾಗಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದಾರೆ .ಆರೋಪಿಗಳಿಗೆ ಡ್ರಗ್ಸ್ ನೀಡಿದ ಆಫ್ರಿಕನ್ ಪ್ರಜೆಯನ್ನೂ ಬಂಧಿಸಿ ಅಗತ್ಯವಿದ್ದರೆ, ನಾವು ಬೆಂಗಳೂರು ಪೊಲೀಸರಿಂದ ಸಹಾಯ ಪಡೆಯುತ್ತೇವೆ” ಎಂದು ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ತಿಳಿಸಿದ್ದಾರೆ.