ಮಂಗಳೂರಿನ ಕೆಲವೊಂದು ಆಸ್ಪತ್ರೆಗಳು ಬಡವರ ಜೀವದೊಂದಿಗೆ ಚೆಲ್ಲಾಟವಾಡಿ ರಕ್ತ ಹಿಂಡುತ್ತಿದ್ದು, ಇದರ ವಿರುದ್ಧ ಧ್ವನಿಯೆತ್ತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಕ್ತಿಯನ್ನು ನೀಡಿದ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ರವರ ಮೇಲೆ ಖಾಸಗಿ ಆಸ್ಪತ್ರೆಯು ನೀಡಿದ ದೂರು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಹೇಳಿದರು.
ಕೊರೊನಾದ ಈ ಜೀವನ್ಮರಣ ಸಂದಿಗ್ದ ಪರಿಸ್ಥಿತಿಯಲ್ಲೂ ಸಮಾಜಕ್ಕೆ ಜೀವ ತುಂಬಿದ ಸುಹೈಲ್ ಕಂದಕ್ ಹೆದರುವ ಅವಶ್ಯಕತೆಯಿಲ್ಲ. ನಿಮ್ಮೊಂದಿಗೆ ಶೋಷಣೆಗೊಂಡ ಸಹಸ್ರಾರು ಜೀವಗಳು ಇವೆ ಎಂದರು.




























