ಪುತ್ತೂರು : ಬೆದ್ರಾಳದಲ್ಲಿ ಆರ್‌ಸಿಸಿ ಮನೆಯೊಂದರ ಮೇಲೆ ಶೀಟ್ ಅಳವಡಿಸುವ ಸಂದರ್ಭ ವೆಲ್ಡಿಂಗ್ ಕೆಲಸದ ಸಹಾಯಕನಾಗಿದ್ದ ಯುವಕ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಕಾಸರಗೋಡು ಮೂಲದ ವೆಳ್ಳರಿಕುಂಡು ಕಲ್ಲಹಳ್ಳಿ ನಿವಾಸಿ ಸೋಮಯ್ಯ ಎಂಬವರ ಪುತ್ರ ದೀಕ್ಷಿತ್ ಎಸ್.ಎಂ.(26) ಮೃತ ಯುವಕ.
ದೀಕ್ಷಿತ್ ಸೋಮಯ್ಯ ಗೌಡ ಅವರ ಹೆಂಡತಿಯ ಅಣ್ಣನ ಮಗ ಪ್ರಜ್ವಲ್‌ರೊಂದಿಗೆ ವೆಲ್ಡಿಂಗ್ ಕೆಲಸಕ್ಕೆ ಸಹಾಯಕನಾಗಿ ಹೋಗುತ್ತಿದ್ದು, ಜು.11ರಂದು ಕೆಮ್ಮಿಂಜೆ ಗ್ರಾಮದ ಬೆದ್ರಾಳದ ಆರ್‌ಸಿಸಿ ಮನೆಯೊಂದರಲ್ಲಿ ಶೀಟ್ ಹಾಕುವ ಕೆಲಸ ಮಾಡುತ್ತಿದ್ದ ಸಂದರ್ಭ ದೀಕ್ಷಿತ್ ಬೊಬ್ಬೆ ಹೊಡೆದು ಆರ್‌ಸಿಸಿಯಲ್ಲಿ ಅಂಗಾತನೆ ಮಲಗಿ ಉಸಿರಾಡಲಾಗದೆ ಒದ್ದಾಡುತ್ತಿದ್ದರು. ತಕ್ಷಣ ಅವರನ್ನು ಪ್ರಜ್ವಲ್ ಮತ್ತು ಪೈಂಟಿಂಗ್ ಕೆಲಸ ಮಾಡುತ್ತಿದ್ದವರು ಹಾಗೂ ಮನೆಯ ಮಾಲಕ ಯೋಗೀಶ್ ರವರ ಪುತ್ರ ಕಾರೊಂದರಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಿದಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ, ದೀಕ್ಷಿತ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಬಂದ ಬಳಿಕ ಸಾವಿಗೆ ಕಾರಣ ತಿಳಿಯಬೇಕಿದೆ.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



























