ಪುತ್ತೂರು : ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ತೆಂಕಿಲ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ಘಟನೆಯಿಂದ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ.
ತೆಂಕಿಲ ಬೈಪಾಸ್ ರಸ್ತೆಯ ವಿವೇಕಾನಂದ ಶಾಲಾ ಕ್ಯಾಂಪಸ್ ಬಳಿಯಿರುವ ಕಿರು ಸೇತುವೆ ಸಮೀಪ ಮರ ಬಿದ್ದಿದ್ದು, ರಸ್ತೆಗೆ ಅಡ್ಡವಾಗಿ ಮರ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಡಕಾಗಿದೆ.
ಬದಲಿ ರಸ್ತೆಯಾಗಿ ಪುತ್ತೂರು ಪೇಟೆಯ ಮೂಲಕ ಮಂಗಳೂರು ಮತ್ತು ಸುಳ್ಯ ರಸ್ತೆಯನ್ನು ಸಂಪರ್ಕಿಸಬಹುದಾಗಿದೆ.