ಪುತ್ತೂರು : ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ವತಿಯಿಂದ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವು ಕೃಷ್ಣ ಮೋಹನ್ ಪಿ.ಎಸ್ ರವರ ನೇತೃತ್ವದಲ್ಲಿ ಜೂ.5 ರಂದು ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಬಳ್ಳುಕ್ಕುರಾಯ, ದಯಾನಂದ ಎಂ, ವಿಶ್ವನಾಥ ನಾಯ್ಕ್, ಪಿ. ಆನಂದ ಪೂಜಾರಿ, ದಾಮೋದರ ಪಾಟಾಳಿ, ಡಾ. ಟಿ. ಕೆ ಶಂಕರ ನಾರಾಯಣ ಭಟ್, ಗುರು ಪ್ರಸಾದ್, ರಾಘವ ಪೂಜಾರಿ, ರಾಮಯ್ಯ ಎಸ್ ಉಪಸ್ಥಿತರಿದ್ದರು.