ಉಪ್ಪಿನಂಗಡಿ : ಯುವತಿಯೋರ್ವಳು ಸ್ನಾನ ಮಾಡುತ್ತಿದ್ದ ವೇಳೆ ಇಣುಕಿ ನೋಡುತ್ತಿದ್ದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದ್ದು, ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ರೆಹಮಾನ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿ ಜು.21 ರಂದು ಸ್ನಾನ ಮಾಡಲು ಹೋದ ವೇಳೆ ಸ್ನಾನದ ಮನೆಯ ಹೊರಭಾಗದಲ್ಲಿ ಯಾರೋ ಇಣುಕಿ ನೋಡುತ್ತಿದ್ದು, ಏನೋ ಶಬ್ದ ಬಂದಂತೆ ಕಂಡು ಬಂದಿದ್ದು, ಯುವತಿ ಕಿಟಕಿಯಲ್ಲಿ ನೋಡಿದಾಗ ನೆರೆಮನೆಯ ಅಬ್ದುಲ್ ರಹಿಮಾನ್ ಎಂಬ ವ್ಯಕ್ತಿ ಸ್ನಾನ ಮಾಡುವುದನ್ನು ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದನು. ತಕ್ಷಣ ವಿಚಾರವನ್ನು ಯುವತಿ ತಾಯಿಗೆ ತಿಳಿಸಿದ್ದು, ತಾಯಿ ಟಾರ್ಚ್ ಲೈಟ್ ಹಾಕಿದಾಗ ತಾಯಿಯನ್ನು ನೋಡಿದ ಅಬ್ದುಲ್ ರಹಿಮಾನ್ ಕಂಪೌಂಡ್ ಗೋಡೆ ಹಾರಿ ಅಲ್ಲಿಂದ ಓಡಿ ಹೋಗಿದ್ದು, ಬಳಿಕ ಅಬ್ದುಲ್ ರಹಿಮಾನ್ ಮುಂದಿನ ಗೇಟ್ ಮೂಲಕ ಮನೆಗೆ ಬಂದು ಬಾಗಿಲು ಬಡಿಯುತ್ತಿದ್ದು, ಕೂಡಲೇ ಯುವತಿ ಮತ್ತು ತಾಯಿ ನೆರೆಕರೆಯವರಿಗೆ ಕರೆಮಾಡಿ ವಿಚಾರ ತಿಳಿಸಿದ್ದು, ಅವರು ಮನೆಗೆ ಬರುವುದನ್ನು ನೋಡಿ ಅಬ್ದುಲ್ ರಹಿಮಾನ್ ಅಲ್ಲಿಂದ ಹೋಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಅಪರಾಧ ಕ್ರಮಾಂಕ 85/2020 ಕಲಂ: 22 ಬಿಎನ್ಎಸ್ 2023 ರಡಿ ಪ್ರಕರಣ ದಾಖಲಾಗಿದೆ.