ಮುಂಡೂರು: ಭಾರತೀಯ ಜನತಾ ಪಾರ್ಟಿ ಮುಂಡೂರು ಮತ್ತು ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಇವರ ಜಂಟಿ ಆಶ್ರಯದಲ್ಲಿ ಗ್ರಾಮದ ಹಲವೆಡೆ ಅಶ್ವತ್ಥ ಗಿಡವನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಶ್ರೀಮತಿ ಪುಷ್ಪ ಗೌಡ ಹಾಗೂ ಅರುಣ್ ಕುಮಾರ್ ಪುತ್ತಿಲ ಅಶ್ವತ್ಥ ಗಿಡವನ್ನು ನೆಡುವುದರ ಮೂಲಕ ‘ಗಿಡ ನೆಡಿ ಅಭಿಯಾನಕ್ಕೆ’ ಚಾಲನೆ ನೀಡಿದರು.
ಮುಂಡೂರು ಗ್ರಾಮದ 1ನೇ ವಾರ್ಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಮತ್ತು ಪ್ರತಿಯೊಂದು ಮನೆಯಲ್ಲಿ ಒಂದು ಗಿಡ ನೆಡುವುದರ ಮೂಲಕ ಅರ್ಥ ಪೂರ್ಣವಾಗಿ ಈ ಅಭಿಯಾನವನ್ನು ಯಶಸ್ವಿ ಗೊಳಿಸಬೇಕೆಂದು ತಿಳಿಸಿದರು.
ಗ್ರಾಮ ಪಂಚಾಯತ್ ಸದಸ್ಯರು ಕೂಡ ಈ ಅಭಿಯಾನ ದಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಕರೆ ನೀಡಿದರು. ಶ್ರೀರಾಮ ಗೆಳೆಯರ ಬಳಗದ ಈ ಸಮಾಜಮುಖಿ ಕಾರ್ಯ ನಿರಂತರ ನಡೆಯಲಿ ಎಂದು ಶುಭ ಹಾರೈಸಿದರು.
ಅರುಣ್ ಪುತ್ತಿಲ ಮಾತನಾಡಿ ಪರಿಸರ ನಾಶದಿಂದ ಪ್ರಸ್ತುತ ಅನೇಕ ಸಮಸ್ಯೆ ಗಳನ್ನು ಎದುಸುತ್ತಿರುವ ನಾವೆಲ್ಲರೂ ಪ್ರಕೃತಿ ರಕ್ಷಿಸುವ ಮತ್ತು ಹಸಿರು ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬನೂ ನಾನೊಂದು ಸಸಿ ನೆಟ್ಟು ಈ ಭೂಮಿಯ ಋಣ ತೀರಿಸಲು ಸಂಕಲ್ಪ ಮಾಡಬೇಕಿದೆ ಎಂದರು. ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ,ಅನಿಲ್ ಕಣ್ಣರ್ನೂಜಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿದ್ದ ಎಲ್ಲರಿಗೂ ಅಶ್ವತ್ಥ ಸಸಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಪೂಜಾರಿ,ಅಶೋಕ್ ಪುತ್ತಿಲ,ಅನಿಲ್ ಕಣ್ಣರ್ನೂಜಿ, ಅರುಣ್ ಕುಮಾರ್ ಪುತ್ತಿಲ, ವಸಂತ್ ರೈ,ಹರೀಶ್ ನಾಯ್ಕ್, ಗೆಳೆಯರ ಬಳಗದ ಮಾಜಿ ಅಧ್ಯಕ್ಷ ಶ್ರೀಧರ ನಾಯ್ಕ್, ಯೋಗೀಶ್ ಕಲ್ಲಮ, ಪ್ರಸಾದ್ ಬಿ.ಕೆ ಧನಂಜಯ ಕಲ್ಲಮ, ಅಮೃತ್ ಕಲ್ಲಮ,ಜಗದೀಶ ಕಲ್ಲಮ, ದಿನೇಶ್,ಬಿ.ಕೆ ಅಶೋಕ್ ಕೊಂಬಿಲ,ಶಿವಪ್ಪ ಬಿ.ಕೆ ರುಕ್ಮಯ್ ಕೇದಾಗದಡಿ, ಬಾಲಚಂದ್ರ ಸೊರಕೆ, ಸಾತ್ವಿಕ್ ಯನ್ ಉಪಸ್ಥಿತರಿದ್ದರು.