ವಿಟ್ಲ: ಬಸ್ ಹತ್ತುವ ಸಂದರ್ಭ ಬಸ್ ಮುಂದಕ್ಕೆ ಚಲಿಸಿದ ಪರಿಣಾಮ ಮಹಿಳೆಯೋರ್ವರು ಬಿದ್ದು ಗಾಯಗೊಂಡ ಘಟನೆ ವಿಟ್ಲ ಪುತ್ತೂರು ರಸ್ತೆಯ ಬದನಾಜೆ ಎಂಬಲ್ಲಿ ನಡೆದಿದೆ.
ಕಾಶಿಮಠ ನಿವಾಸಿ ಕಂಬಳಬೆಟ್ಟು ಖಾಸಗಿ ಶಾಲೆಯ ಉದ್ಯೋಗಿ ಮಾಲತಿ (38) ಗಾಯಗೊಂಡ ಮಹಿಳೆ.
ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.



























