ಬಂಟ್ವಾಳ : ಫಲ್ಗುಣಿ ನದಿಯಲ್ಲಿ ಏಕಾಏಕಿ ನೀರು ಏರಿಕೆಯಾಗಿದ್ದು, ಪೊಳಲಿ ಸಮೀಪದ ಅಮ್ಮುಂಜೆ ಗ್ರಾಮದ ಹೊಳೆಬದಿಯ ಕಡಪು ಕರಿಯ ಎಂಬಲ್ಲಿ ಸುಮಾರು 8 ಮನೆಗಳಿಗೆ ನೀರು ನುಗ್ಗಿದ್ದು, ಎಲ್ಲಾ ಕುಟುಂಬಗಳನ್ನು ತಹಶೀಲ್ದಾರ್ ಅರ್ಚನಾ ಭಟ್ ಅವರ ನಿರ್ದೇಶನದಂತೆ ತಾಲೂಕು ಆಡಳಿತ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ನೆರವಿನಿಂದ ರಕ್ಷಣೆ ಕಾರ್ಯ ಮಾಡುತ್ತಿದ್ದಾರೆ.
ಫಲ್ಗುಣಿ ನದಿಯಲ್ಲಿ ನೀರು ಏರಿಕೆಯಾದ ಬಳಿಕ ಕೃತಕ ನೆರೆಯ ರೂಪದಲ್ಲಿ 8 ಮನೆಗಳಿಗೆ ನೀರು ನುಗ್ಗಿದೆ ಎನ್ನಲಾಗಿದೆ. ಅದರಲ್ಲಿ ಮೂರು ಮನೆಗಳು ಅಪಾಯಕಾರಿಯಾಗಿದ್ದು, ಇದೀಗ ಅಗ್ನಿಶಾಮಕದಳದ ಬೋಟ್ ಮೂಲಕ ಅವರನ್ನು ರಕ್ಷಣೆಯಲ್ಲಿ ತೊಡಗಿದ್ದಾರೆ.
ನದಿಯ ಕಸದ ರಾಶಿಯಿಂದ ರಕ್ಷಣಾ ಕಾರ್ಯಕ್ಕೆ ಕೊಂಚ ಮಟ್ಟಿಗೆ ತೊಂದರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.