ಪುತ್ತೂರು : ನಿರಂತರ ಮಳೆಯಿಂದಾಗಿ ಹಲವಾರು ಕಡೆಗಳಲ್ಲಿ ಭೂ ಕುಸಿತ ಉಂಟಾಗುತ್ತಿದ್ದು, ಪುತ್ತೂರು ಸಮೀಪದ ನರಿಮೊಗರು ರೈಲ್ವೇ ಟ್ರ್ಯಾಕ್ ಬಳಿಯ ಗುಡ್ಡ ಕೂಡಾ ಕುಸಿಯುವ ಭೀತಿಯಲ್ಲಿದೆ.
ಒಂದು ಬದಿಯ ಗುಡ್ಡ ಈಗಾಗಲೇ ರೈಲ್ವೇ ಟ್ರ್ಯಾಕ್ ಮೇಲೆ ಕುಸಿದು ಬಿದ್ದಿದ್ದು, ತೆರವು ಕಾರ್ಯ ಮಾಡಲಾಗುತ್ತಿದೆ.
ಇದೀಗ ಮತ್ತೊಂದು ಬದಿಯ ಗುಡ್ಡ ಕೂಡಾ ಕುಸಿಯುವ ಭೀತಿಯಲ್ಲಿದ್ದು, ನಿರಂತರ ಮಳೆ ಬಂದರೆ ಕುಸಿದು ಬೀಳುವ ಸಂಭವವಿದೆ ಎನ್ನಲಾಗುತ್ತಿದೆ.