ವಿಟ್ಲ : ಹಿರಿಯ ಕಾಂಗ್ರೆಸ್ ಮುಖಂಡ, ವಿಟ್ಲ ಪೇಟೆಯಲ್ಲಿ ಹಲವು ವರ್ಷಗಳಿಂದ ಕಾರ್ಯಾ ನಿರ್ವಹಿಸುತ್ತಿರುವ ಉಳ್ಳಾಲ್ತಿ ಫೂಟ್ ವೇರ್ ಮಾಲಕ, ಇಡ್ಕಿದು ಅರ್ಕೆಚ್ಚಾರು ನಿವಾಸಿ ಕೂಸಪ್ಪ ನಾಯ್ಕ್ (91) ನಿಧನರಾದರು.
ಕೂಸಪ್ಪ ನಾಯ್ಕ್ ರವರು ವಿಟ್ಲದ ಹಿರಿಯ ಉದ್ಯಮಿಯಾಗಿದ್ದು, ವಿಟ್ಲ ಮೇಗಿನಪೇಟೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ನಿರ್ಮಿಸಿ ಹಲವು ವರ್ಷಗಳಿಂದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದರು.
ಮೃತರು ಪತ್ನಿ, ಇಬ್ಬರು ಗಂಡುಮಕ್ಕಳು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.