ಬಿಹಾರ : ಹೈಟೆನ್ಷನ್ ವಿದ್ಯುತ್ ತಂತಿಗೆ ಡಿಜೆ ವಾಹನ ಸಿಲುಕಿ ಸುಮಾರು 9 ಜನರು ಸಾವನ್ನಪ್ಪಿದ ಘಟನೆ ನಡೆದಿದೆ. ಹಲವಾರು ಮಂದಿ ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದಾರೆ.
ಬಿಹಾರದ ಸುಲ್ತಾನ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಧ್ಯರಾತ್ರಿ ವೇಳೆ ಡಿಜೆ ವಾಹನ ಸಂಚರಿಸುವಾಗ ಹೈಟೆನ್ಷನ್ ವೈರ್ಗೆ ಸಿಲುಕಿಕೊಂಡಿದೆ. ಪರಿಣಾಮ ಸಾವು-ನೋವು ಸಂಭವಿಸಿದೆ.
ಡಿಜೆ ವಾಹನವು ತುಂಬಾ ಎತ್ತರವಾಗಿತ್ತು. ರಾತ್ರಿ ವೇಳೆ ಹೈಟೆನ್ಷನ್ ವೈರ್ ಅಡ್ಡಲಾಗಿ ಹಾದು ಹೋಗಿದ್ದು ಕಾಣಿಸಿಲ್ಲ. ವೈರ್ ತಾಗಿದೊಡನೆ 9 ಜನರು ಸಾವನ್ನಪ್ಪಿದ್ದಾರೆ.
ಗಾಯಗೊಂಡವರನ್ನು ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ.


























