ಪುತ್ತೂರು : ಮುಂಡೂರು ನಡುಬೈಲುಗುತ್ತು ನಾರಾಯಣ ಸಾಲಿಯಾನ್ ಮತ್ತು ದಿ.ಅಪ್ಪಿ ನಡುಬೈಲು ರವರ ಪುತ್ರ, ಅಕ್ಷಯ ಕಾಲೇಜಿನ ಸಂಚಾಲಕ ಜಯಂತ್ ನಡುಬೈಲು ರವರ ಸಹೋದರ, ನಡುಬೈಲು ನಿವಾಸಿ ಆನಂದ್ ಪೂಜಾರಿ (49) ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಆನಂದ್ ಪೂಜಾರಿ ಪ್ರಗತಿಪರ ಕೃಷಿಕರಾಗಿದ್ದು, ಕೊಡ್ನೀರು ಕರೆಮನೆಕಟ್ಟೆ ಹಾಲು ಉತ್ಪಾದಕರ ಸೊಸೈಟಿ ನಿರ್ದೇಶಕರಾಗಿದ್ದು, ಪುರುಷರಕಟ್ಟೆಯಲ್ಲಿ ಚಿಕನ್ ಸೆಂಟರ್ ನಡೆಸುತ್ತಿದ್ದರು.
ಮೃತರು ತಂದೆ, ಪತ್ನಿ, ಮೂವರು ಮಕ್ಕಳು, ಸಹೋದರ, ಸಹೋದರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.