ಬಂಟ್ವಾಳ : ನೀನು ನನಗೆ ಬೇಕು, ನಿನ್ನನ್ನು ಅನುಭವಿಸದೆ ಬಿಡುವುದಿಲ್ಲ ಎಂದು ಅನ್ಯಕೋಮಿನ ಯುವಕನೋರ್ವ ಮಹಿಳೆಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ ಘಟನೆ ಕರಿಯಂಗಳದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಕರಿಯಂಗಳ ನಿವಾಸಿ ತಸ್ಸೀಫ್ ಪ್ರಕರಣ ಆರೋಪಿಯಾಗಿದ್ದು, ಆತ ಮಹಿಳೆ ಪುತ್ರಿಯನ್ನು ಟ್ಯೂಷನ್ ಗೆ ಬಿಟ್ಟು ಮನೆಗೆ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿ ಅಸಭ್ಯವಾಗಿ ವರ್ತಿಸಿ ನೀನು ಸಿಗದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ಹಿಂದೆಯೂ ಕಿಟಕಿಯಲ್ಲಿ ಇಣುಕಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.