ಪುತ್ತೂರು : ಕಳೆದ ವರ್ಷದ ಮೇ ತಿಂಗಳಿನಿಂದೀಚೆಗೆ ಪುತ್ತೂರು ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ನಡೆಯುತ್ತಿಲ್ಲ. ನಗರಸಭೆಯ ಮೊದಲ ಹಂತದ ಎರಡೂವರೆ ವರ್ಷದ ಆಡಳಿತಾವಧಿ 2023 ರ ಮೇ ತಿಂಗಳಲ್ಲಿ ಮುಗಿದಿದ್ದು, ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದೀಗ 2ನೇ ಅವಧಿಗೆ ಮೀಸಲಾತಿ ಪಟ್ಟಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಎಸ್.ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜನರಲ್ ಅಭ್ಯರ್ಥಿ ಸ್ಪರ್ಧಿಸಬಹುದಾಗಿದೆ.
ಪುತ್ತೂರು ನಗರಸಭೆಯ 31 ಸದಸ್ಯರಲ್ಲಿ 25 ಸದಸ್ಯ ಬಲ ಹೊಂದಿರುವ ಬಿಜೆಪಿ ಅಧಿಕಾರವಿದೆ.

ಕಾಂಗ್ರೆಸ್ 5, ಎಸ್.ಡಿ.ಪಿ.ಐ 1 ಸದಸ್ಯ ಬಲ ಹೊಂದಿದೆ.
ದರ್ಬೆ ವಾರ್ಡ್ ನಿಂದ ಶಶಿಕಲಾ ಸಿ.ಎಚ್. ಮತ್ತು ಕೃಷ್ಣನಗರ ವಾರ್ಡ್ ನಿಂದ ಲೀಲಾವತಿ ಇಬ್ಬರು ಎಸ್.ಸಿ ಮಹಿಳೆಯರಿದ್ದು, ಅಧ್ಯಕ್ಷ ಪಟ್ಟ ಯಾರ ಪಾಲಾಗಲಿದೆ ಎಂಬ ಕೂತೂಹಲ ಎಲ್ಲರಲ್ಲಿ ಮೂಡಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಜನರಲ್ ಅಭ್ಯರ್ಥಿಯಡಿ ಯಾರು ಕೂಡ ಸ್ಪರ್ಧಿಸಹುದು.
ಸದ್ಯ ಮೀಸಲಾತಿ ಪ್ರಕಟಗೊಂಡಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಯಾರು ಅಲಂಕರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.