ರಾಜಸ್ಥಾನ : ಆಧುನಿಕ ಕಾಲಘಟ್ಟದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಸದ್ಯ ಯುವಜನತೆಗೆ ಹೃದಯಾಘಾತದಿಂದ ಪಾರಾಗುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಅದರಂತೆಯೇ ಶಿಕ್ಷಕರೊಬ್ಬರು ನೃತ್ಯ ಮಾಡುವ ವೇಳೆ ಹಠಾತ್ ನಿಧನರಾದ ಘಟನೆ ನಡೆದಿದೆ.
ಡ್ಯಾನ್ಸ್ ಮಾಡುವ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಶಿಕ್ಷಕನ ಕೊನೆಯ ಕ್ಷಣದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದೆ. ಕಿಶನ್ಗಢ್-ರೆನ್ವಾಲ್ ತಹಸಿಲ್ ಗ್ರಾಮವೊಂದರಲ್ಲಿ ಈ ದುರ್ಘಟನೆ ಸಂಭವಿಸಿದೆ. ಶಿಕ್ಷಕನನ್ನು ಮುನ್ನಾ ರಾಮ್ ಜಖರ್ ಎಂದು ಗುರುತಿಸಲಾಗಿದೆ.
ಮುನ್ನಾ ರಾಮ್ ಜಖರ್ರವರು ಭಜನ್ ಸಂಧ್ಯಾ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಹೃದಯಾಘಾತವಾಗಿದೆ. ಸಮಾರಂಭವೊಂದರಲ್ಲಿ ತೃತೀಯಲಿಂಗಿಯೊಂದಿಗೆ ನೃತ್ಯ ಮಾಡಲು ಮುಂದಾದಾಗ ಹಾರ್ಟ್ ಅಟ್ಯಾಕ್ ಸಂಭವಿಸಿದೆ.
ಶಿಕ್ಷಕ ಕುಸಿದು ಬಿದ್ದು ಏಕಾಏಕಿ ಸಾವನ್ನಪ್ಪಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡುತ್ತಿದೆ.