ಬೆಂಗಳೂರು : ಗಂಡನನ್ನು ಬಿಟ್ಟು ಬಾಳು ಕಟ್ಟಿಕೊಂಡಿದ್ದ ಮಹಿಳೆಗೆ ಕಾರು ಚಾಲಕನೋರ್ವ ಬಾಳು ಕೊಡ್ತೀನಿ ಎಂದು ನಂಬಿಸಿ ಮೋಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆಸಿದೆ.
ಕ್ಯಾಬ್ ಚಾಲಕ ಪ್ರಜ್ವಲ್ ಎಂಬಾತ ವಿವಾಹಿತ ಮಹಿಳೆಗೆ ಬಾಳು ಕೊಡ್ತೀನಿ ಎಂದು ನಂಬಿಸಿ ಆಕೆಯ ಜೊತೆ ಕೆಲ ದಿನಗಳ ಕಾಲ ಒಟ್ಟಿಗೆ ಜೀವನ ನಡೆಸಿ ಆಕೆಯನ್ನು ಬಳಸಿಕೊಂಡು ಇದೀಗ ಬೋರಾದ್ಳು ಎಂದು ಬಿಟ್ಟು ಹೋಗಿದ್ದಾನೆ.
ಘಟನೆ ಸಂಬಂಧ ಮಹಿಳೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ.
13 ವರ್ಷದ ಹಿಂದೆ ವ್ಯಕ್ತಿಯೊಬ್ಬನನ್ನ ವಿವಾಹವಾಗಿದ್ದ ಮಹಿಳೆ. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಆಗಿದ್ರು. ಗಂಡ ಕುಡಿದು ಬಂದು ಪ್ರತಿದಿನ ಕಿರುಕುಳ ಕೊಡ್ತಿದ್ದಾನೆಂದು ಬಿಟ್ಟು ತವರು ಮನೆಗೆ ಬಂದಿದ್ದಳು. ಬಳಿಕ ಇತ್ತೀಚೆಗೆ ಒಂದು ವರ್ಷದಿಂದ ಪ್ರತ್ಯೇಕವಾಗಿ ಬೆಂಗಳೂರಲ್ಲಿ ವಾಸ ಮಾಡ್ತಿದ್ಳು. ಸ್ನೇಹಿತರ ಜೊತೆಗೆ ರೂಮ್ ನಲ್ಲಿ ವಾಸ್ತವ್ಯ ಹೂಡಿದ್ಳು. ಬೇಜಾರು ಕಳಿಯಲಿ ಅಂತಾ ಆಗಾಗ ರೀಲ್ಸ್ ಮಾಡ್ತಿದ್ಳು.
ಆಕೆಯ ರೀಲ್ಸ್ ಗೆ ‘ಬ್ಯೂಟಿಫುಲ್’ ಎಂದು ಪ್ರಜ್ವಲ್ ಕಮೆಂಟ್ ಹಾಕಿದ್ದ. ಅದೇ ಕಮೆಂಟ್, ಮೆಸೇಜ್ ವರೆಗೂ ಬಂದಿತ್ತು. ನಂತರ ಫೋನ್ ನಂಬರ್ ಎಕ್ಸ್ ಚೇಂಜ್ ಆಗಿ ಚಾಟಿಂಗ್ ಶುರು ಮಾಡಿದ್ರು. ಇಬ್ಬರು ಪರಸ್ಪರ ವೈಯಕ್ತಿಕ ವಿಚಾರ ಶೇರ್ ಮಾಡಿಕೊಳ್ತಿದ್ರು. ತನ್ನ ಜೀವನದ ಕಥೆಯನ್ನೆಲ್ಲ ಮಹಿಳೆ ಹೇಳಿಕೊಂಡಿದ್ದಳು. ನನಗೆ 13 ಹಾಗೂ 10 ವರ್ಷದ ಮಕ್ಕಳಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಳು. ಹೀಗಿದ್ದರೂ ಮದುವೆ ಆಗೋದಾಗಿ ಪ್ರಜ್ವಲ್ ನಂಬಿಕೆಯ ಮಾತುಗಳನ್ನಾಡಿದ್ದ. ಹೊಸ ಜೀವನ ಕಟ್ಟಿಕೊಳ್ಳೋಣ ಎಂದು ಹೇಳಿದ್ದ. ಅಷ್ಟರಲ್ಲಾಗಲೇ ಮಹಿಳೆ ಉಳಿದುಕೊಂಡಿದ್ದ ಮನೆಯಲ್ಲಿ ಸ್ನೇಹಿತರು ಮನೆ ಖಾಲಿ ಮಾಡಿದ್ರು.
ಕೆಂಗೇರಿ ಸಮೀಪದ ಮನೆಯಲ್ಲಿ ಮಹಿಳೆ ವಾಸವಿದ್ದಳು. ಅದೇ ಮನೆಯಲ್ಲಿ ಪ್ರಜ್ವಲ್ ಕೂಡ ಉಳಿದುಕೊಂಡಿದ್ದ. ಮಗನ್ನ ಹಾಸ್ಟೆಲ್ ನಲ್ಲಿ ಸೇರಿಸಿದ್ರೆ ಮಗಳನ್ನು ತನ್ನ ತಾಯಿ ಮನೆಯಲ್ಲಿ ಬಿಟ್ಟು ಇವರಿಬ್ಬರು ಒಟ್ಟಿಗೆ ಇದ್ದರು. ಕಳೆದ ಕೆಲ ದಿನಗಳಿಂದ ಮನೆಗೆ ಬರದೇ ಪ್ರಜ್ವಲ್ ಕಥೆ ಕಟ್ತಿದ್ದ. ವಿಚಾರಿಸಿದಾಗ ಮದುವೆ ಆಗಲ್ಲ ಎಂದು ಹೇಳಿದ್ದ. ಇದರಿಂದ ನೊಂದ ಮಹಿಳೆ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ.