ಉಡುಪಿ : ಹಸುವನ್ನು ಕಳ್ಳತನ ಮಾಡಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುವ ದಂಧೆಕೋರ ಸುದ್ದಿಯನ್ನು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಆದರೆ ಉಡುಪಿಯ ನೇಜಾರಿನಲ್ಲಿ ನಡೆದ ಘಟನೆಯೊಂದು ಹಸು ಮಾಲೀಕರನ್ನು ಬೆಚ್ಚಿಬೀಳಿಸುವಂತಿದೆ. ಯಾಕೆಂದರೆ ಜಮೀನಿನಲ್ಲಿ ಮೇಯುತ್ತಿದ್ದ ಹಸು ಏಕಾಏಕಿ ಮಾಯಾವಾಗಿದ್ದು, ಇದರ ಹಿಂದಿನ ಸತ್ಯವನ್ನು ಸಿಸಿ ಟಿವಿ ತೆರೆದಿಟ್ಟಿದೆ.
ನೇಜಾರಿನ ಪ್ರಗತಿ ನಗರದ ನಿವಾಸಿ, ಗಂಗಾಧರ ಅವರು ಭಾನುವಾರದಂದು ಬೆಳಗ್ಗೆ ಮೇಯಲೆಂದು ಹೊರಬಿಟ್ಟಿದ್ದರು. ಆದರೆ ಆ ಬಳಿಕ ಹಸು ಏಕಾಏಕಿ ಮಾಯಾವಾಗಿತ್ತು. ಇದಕ್ಕಾಗಿ ಸ್ಥಳೀಯವಾಗಿದ್ದ ಸಿಸಿಟಿವಿ ಪರಿಶೀಲಿಸಿದಾಗ ದಸು ಮಾಲೀಕರು ಬೆಚ್ಚಿಬಿದ್ದಿದ್ದಾರೆ. ಯಾಕೆಂದರೆ ಅವರ ನೆರೆಮನೆಯ ವಾಸಿ ಇಬ್ರಾಹಿಂ ಎಂಬಾತ ಹಸುವನ್ನು 11.45ರ ಹೊತ್ತಿಗೆ ಎಳೆದುಕೊಂಡು ಹೋಗುವ ದೃಶ್ಯ ಸೆರೆಯಾಗಿತ್ತು.
ಇಬ್ರಾಹಿಂ ಹಸುವನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದು ಆ ಬಳಿಕ ಮನೆಯ ಟಾಯ್ಲೆಟ್ನಲ್ಲಿ ಗೋ ಹತ್ಯೆ ಮಾಡಿ ಮಾಂಸವನ್ನು ಮಾರಾಟ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಹಸುವನ್ನು ಬಲವಂತವಾಗಿ ಎಳೆದೊಯ್ಯುವ ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಗೋ ಮಾಲಿಕರು ಇಬ್ರಾಹಿಂ ವಿರುದ್ದ ದೂರು ನೀಡಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.