ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಶಿಶಿಲ ಶಿಶಿಲೇಶ್ವರ ದೇವಾಲಯದಲ್ಲಿನ ದೇವರ ಮೀನುಗಳ ತೊಂದರೆಗೆ
ಇಳಿದರೆ ತಾವು ಹಿಂದೂ ಸಮಾಜದ ವಿರೋಧಕ್ಕೆ ಒಳಗಾಗಿ ತೊಂದರೆಗೀಡಬೇಕಾದಿತು ಎಂದು ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ಮುರಳಿ ಕೃಷ್ಣ ಹಸಂತ್ತಡ್ಕ ಎಚ್ಚರಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಶಿಶಿಲ ಶಿಶಿಲೇಶ್ವರ ದೇವಾಲಯದಲ್ಲಿ ದೇವರ ಮೀನು ಎಂದು ಅಪಾರ ಭಕ್ತಿ ಶ್ರದ್ದೆಗಳಿಂದ ಪೂಜಿಸಿ ಪೋಷಿಸಿಕೊಂಡು ಬಂದಿರುವ ಮತ್ಸ್ಯ ಸಂಕುಲದ ಮೇಲೆ ಆಗಾಗ ಕಿಡಿಗೇಡಿಗಳು ವಿಷ ನೀಡಿ ಹತ್ಯೆ ಮಾಡುತ್ತಿರುವುದನ್ನು ಅತ್ಯುಗ್ರ ಶಬ್ದಗಳಲ್ಲಿ ಖಂಡಿಸುತ್ತೇವೆ.
ಆದರೆ ಲಾಕ್ ಡೌನ್ ಸಂದರ್ಭದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಳಕಳಿ ಅತ್ಯಂತ ಮಹತ್ವದ್ದು,
ಈಗಾಗಲೇ ನಾಲ್ಕು ಕ್ವಿಂಟಾಲ್ ಗಿಂತ ಹೆಚ್ಚು ಆಹಾರ ಧಾನ್ಯಗಳನ್ನು ಈ ಮತ್ಸ್ಯ ಸಂಕುಲಗಳಿಗೆ ನೀಡಿದ ಎಲ್ಲರಿಗೂ ಅಭಿನಂದನೆಗಳು ಸಲ್ಲಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಶಿಶಿಲೇಶ್ವರನ ಬಳಿ ಇರುವ ಈ ವಿಶೇಷ ಮತ್ಸ್ಯ ಸಂಕುಲ (ದೇವರ ಮೀನುಗಳ) ರಕ್ಷಣೆಗೆ ಊರಿನ ಪರವೂರಿನ ಗಣ್ಯರನ್ನು, ಕಾರ್ಯಕರ್ತರನ್ನು ಸೇರಿಸಿ ಸಂರಕ್ಷಣಾ ಸಮಿತಿ ಮಾಡುವುದರ ಬಗ್ಗೆಯೂ ಚಿಂತನೆ ಮಾಡುತ್ತಿದ್ದೇವೆ.
ಇನ್ನು ಮುಂದೆ ಪವಿತ್ರವಾಗಿರುವ ಈ ದೇವರ ಮೀನುಗಳ ತೊಂದರೆಗೆ ಇಳಿದರೆ ತಾವು ಹಿಂದೂ ಸಮಾಜದ ವಿರೋಧಕ್ಕೆ ಒಳಗಾಗಿ ತೊಂದರೆಗೀಡಬೇಕಾದಿತು ಎಂದು ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ಮುರಳಿ ಕೃಷ್ಣ ಹಸಂತ್ತಡ್ಕ ಹಾಗೂ ಧಾರ್ಮಿಕ ಪರಿಷತ್ ಸದಸ್ಯರಾದ ದೇವೇಂದ್ರ ಹೆಗ್ಡೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.